ಮಂಗಳೂರಿನಲ್ಲಿ ನಡೆದಿರುವ ಕುಕ್ಕರ್ ಬಾಂಬ್ ಸ್ಪೋಟ ದಿನದಿಂದ ದಿನಕ್ಕೆ ತಿರುವುಪಡೆದುಕೊಳ್ಳುತ್ತಿದ್ದು, ಈ ನಡುವೆ ಪ್ರಕರಣ ಸಂಬಂಧ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಕಾನೂನು ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಮಹತ್ವದ ಮಾಹಿತಿಗಳನ್ನು ನೀಡಿದ್ದಾರೆ.
ಘಟನೆ ಸಂಬಂಧ ಸದ್ಯ ಮೈಸೂರಿನಲ್ಲಿ ಉಗ್ರ ತಾರಿಖ್ ವಾಸವಿದ್ದ ಮನೆಯಲ್ಲಿ ಹಲವು ಸ್ಪೋಟಕ ಸಾಮಾಗ್ರಿಗಳನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ ಅಂತ ತಿಳಿಸಿದ್ದಾರೆ.
ಇನ್ನೂ ಈ ನಡುವೆ ಮಂಗಳೂರಿಗೆ ತೆರಳುವ ಮುನ್ನ ಕುಕ್ಕರ್ ಬಾಂಬ್ ಕೈಯಲ್ಲಿಡಿದು ಫೋಟೋಗೆ ಪೋಸ್ ನೀಡಿದ್ದ ಎನ್ನಲಾಗಿದೆ ಅದರ ಫೋಟೋಗಳು ವೈರಲ್ ಆಗಿದ್ದಾವೆ.