ಕುಂದಗೋಳ; ತಾಲೂಕಿನ ಯರಗುಪ್ಪಿ ಗ್ರಾಮದ ಚಿಕ್ಕನರ್ತಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹತ್ತಿರ ನಿರ್ಮಾಸಿಲಾದ ಬಸ್ ತಂಗುದಾಣ, ತ್ಯಾಜ್ಯ ವಸ್ತುಗಳ ಸಂಗಮವಾಗಿದೆ.
ಹೌದು..! ಈ ಬಸ್ ನಿಲ್ದಾಣ ಅವ್ಯವಸ್ಥೆ ಒಂದಾ ಎರಡಾ ನೂರೆಂಟು ಸಮಸ್ಯೆಗಳ ಆಗರವಾಗಿದೆ. ಬಸ್ ತಂಗುದಾಣದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು ಮಹಿಳೆಯರಿಗೆ ಕೂಡಲು ಆಸನದ ವ್ಯವಸ್ಥೆ ಇಲ್ಲದೆ ಇರುವುದರಿಂದ ಬಸ್ ನಿಲ್ದಾಣ, ಎದುರುಗಡೆ ಮನೆಯೊಂದರಲ್ಲಿ ನಿಂತು ಪ್ರಯಾಣ ಬೆಳಸುತ್ತಾರೆ. ನಿಲ್ದಾಣದಲ್ಲಿ ಸಾರಾಯಿ ಟೆಟ್ರಾ ಪ್ಯಾಕೇಟ್ ಗಳು, ಬಿಡಾ , ಸಿಗರೇಟು, ತ್ಯಾಜ್ಯ ವಸ್ತುಗಳು, ದುರ್ವಾಸನೆ ಎದ್ದು ನಾರುತ್ತಿದ್ದರು, ಏನು ಆಗೇ ಇಲ್ಲ ಎನ್ನುವಂತೆ, ಸ್ಥಳೀಯ ಅಧಿಕಾರಿಗಳು, ರಾಜಕಾರಣಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ಈ ಕಟ್ಟಡದ ದುಸ್ಥಿತಿ ಕಂಡು ಸ್ಥಳೀಯರ ಬಳಿ ವಿಚಾರಿಸಿದಾಗ 25 ವರ್ಷಕ್ಕೂ ಹೆಚ್ಚು ವರ್ಷದ ಹಿಂದೆ ಈ ಕಟ್ಟಡ ನಿರ್ಮಿಸಿದ್ದಾರೆ. ಕಟ್ಟಡ ಶಿಥಿಲಾವ್ಯಸ್ಥೆ ತಲುಪಿದರು ಸ್ವಲ್ಪವೂ ಕಾಳಜಿ ತೋರಿಸದೆ, ಕೇವಲ ಕಛೇರಿಗೆ ಸೀಮಿತವಾದ ಅಧಿಕಾರಿಗಳೇ ಒಮ್ಮೆ ಇತ್ತ ಗಮನ ಹರಿಸಿ. ಇದರ ಜೊತೆಗೆ ಮುಳ್ಳಹಳ್ಳಿ ಕ್ರಾಸ್ ಬಳಿ ಬಸ್ ನಿಲ್ದಾಣ ಇಲ್ಲದೇ ಇರುವುದರಿಂದ ಗ್ರಾಮದ ಮತ್ತು ಪಕ್ಕದ ಗ್ರಾಮಸ್ಥರು ಬಸ್ ನಿಲ್ದಾಣದ ಪಕ್ಕದ ಮನೆಗಳಲ್ಲಿ ಅಶ್ರಯ ಪಡೆಯುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಗ್ರಾಮ ಪಂಚಾಯತಿ ಆಡಳಿತ ವೈಖರಿ ವಿರುದ್ದ ಕಿಡಿಕಾರಿದರು.
ಕೂಡಲೇ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸಾರ್ವಜನಿಕ ರಿಗೆ ಸೂಕ್ತವಾದ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಇಲ್ಲಿಯ ಜನರ ಅಗ್ರಹವಾಗಿದೆ.
ವರದಿ; ಶಾನು ಯಲಿಗಾರ