ವೃದ್ಧನೊಬ್ಬ ನುಂಗಿದ 187 ನಾಣ್ಯಗಳನ್ನು ಎಂಡೋಸ್ಕೋಪಿ ಮೂಲಕ ಹೊಟ್ಟೆಯಿಂದ ಯಶಸ್ವಿಯಾಗಿ ಬಾಗಲಕೋಟೆಯ ಶ್ರೀ ಕುಮಾರೇಶ್ವರ ಆಸ್ಪತ್ರೆಯ ವೈದ್ಯರು ಹೊರ ತೆಗೆದಿದ್ದಾರೆ.
ಡಾಕ್ಟರ್ ಈಶ್ವರ ಕಲಬುರ್ಗಿ ಮತ್ತು ಡಾಕ್ಟರ್ ಪ್ರಕಾಶ್ ಕಟ್ಟಿಮನಿ ವೈದ್ಯರೊಂದಿಗೆ ಅರವಳಿಕೆ ತಜ್ಞರಾದ ಡಾಕ್ಟರ್ ಅರ್ಚನಾ ಮತ್ತು ರೂಪ ಕುಲಕುಂದೆ ಚಿಕಿತ್ಸೆ ನೀಡಿರುತ್ತಾರೆ.
ಲಿಂಗಸಗೂರು ತಾಲೂಕಿನ ಡ್ಯಾಮಪ್ಪ ಹರಿಜನ ಎಂಬ 58 ವರ್ಷದ ವಯಸ್ಸಿನ ವೃದ್ಧ ಐದು ರೂಪಾಯಿ 56 ನಾಣ್ಯಗಳು ಎರಡು ರೂಪಾಯಿಯ 51 ನಾಣ್ಯಗಳು ಮತ್ತು ಒಂದು ರೂಪಾಯಿಯ 80 ನಾಣ್ಯಗಳನ್ನು ಹೀಗೆ ಒಟ್ಟು 187 ನಾಣ್ಯಗಳನ್ನು ನುಂಗಿದ್ದರು. ನುಂಗಿದ ಒಟ್ಟು ನಾಣ್ಯಗಳ ತೂಕ ಒಂದುವರೆ ಕಿಲೋ ಎಂದು ಹೇಳಲಾಗುತ್ತಿದೆ.
ವಿಷಯ ತಿಳಿದ ಕುಟುಂಬದ ಸದಸ್ಯರು ದಿನಾಂಕ 26 11 2018 ರಂದು ಬಾಗಲಕೋಟೆಯ ಶ್ರೀ ಕುಮಾರಸ್ವಾಮಿ ಆಸ್ಪತ್ರೆಗೆ ಕರೆತಂದು ತುರ್ತು ಚಿಕಿತ್ಸೆಗೆ ಒಳಪಡಿಸಿದಾಗ ವೈದ್ಯರು ಎಕರೆ ಮಾಡಿ ಪರೀಕ್ಷಿಸಿದಾಗ ನುಂಗಿದ ನಾಣ್ಯಗಳು ಕಂಡು ಬಂದಿವೆ.
ರೋಗಿಯ ಜೀವಕ್ಕೆ ಅಪಾಯವಿರುವುದು ತಿಳಿದುಬಂದ ನಂತರ ಎಂಡೊಸ್ಕೋಪಿ ಮಾಡಿ ನಾಣ್ಯಗಳನ್ನು ಹೊರ ತೆಗೆದು ರೋಗಿಯನ್ನು ಪ್ರಾಣಾಪಾಯದಿಂದ ಉಳಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಚಿಕಿತ್ಸೆಯ ನಂತರ ರೋಗಿಯು ಚೇತರಿಸಿಕೊಳ್ಳುತ್ತಿರುವನೆಂದು ವೈದ್ಯರು ಹೇಳಿದ್ದಾರೆ.
ಚಿಕಿತ್ಸೆ ನೀಡಿ ರೋಗಿಯನ್ನು ಗುಣಮುಖಗೊಳಿಸಿದ ವೈದ್ಯರನ್ನು ವೈದ್ಯಕೀಯ ಸಮೂಹ ಹಾಗೂ ಶಾಸಕರು ಅಭಿನಂದಿಸಿದ್ದಾರೆ.