ಟಿಕ್ ಟಾಕ್ ಬಂದ ನಂತರ ಸಾಕಷ್ಟು ಜನ ಸೆಲೆಬ್ರಿಟಿಗಳು ಹುಟ್ಟಿಕೊಂಡರು ಹಾಗೂ ಎಲ್ಲೋ ಮೂಲೆ ಮೂಲೆಯಲ್ಲಿರುವ ಸಾಕಷ್ಟು ಜನ ತಮ್ಮ ವಿಡಿಯೋಗಳನ್ನು ಟಿಕ್ ಟಾಕ್ ನಲ್ಲಿ ಹಾಕುವ ಮೂಲಕ ರಾತ್ರೋರಾತ್ರಿ ಸ್ಟಾರ್ಗಳಾಗಿ ಬೆಳದು ನಿಂತರು. ಅದೇ ರೀತಿ ಬೆಳೆದಂತಹ ಮಹಿಳೆಯೊಬ್ಬಳು ಹನಿ ಟ್ರ್ಯಾಪ್ ಮಾಡಿದಂತಹ ರೋಚಕ ಕಥೆ ಇದು.
ನಮ್ರ ಎಂಬಾಕೆ ರಿಲ್ಸ್ ಗಳನ್ನು ಹಾಗೂ ಟಿಕ್ ಟಾಕ್ ನಲ್ಲಿ ವಿಡಿಯೋಗಳನ್ನು ಮಾಡುವ ಮೂಲಕ ದೆಹಲಿಯಲ್ಲಿ ರಾತ್ರೋರಾತ್ರಿ ಸ್ಟಾರ್ ಅದಳು. ಈಕೆಯ ಇನ್ಸ್ಟಾಗ್ರಾಮ್ ನಲ್ಲೂ ಸಹ ಸಾಕಷ್ಟು ಫಾಲೋವರ್ಸ್ ಗಳು ಇದ್ದಾರೆ. ಈಕೆಯ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕುವ ಮೂಲಕ ಸ್ಟಾರ್ ಆಗಿ ಬೆಳೆದು ನಿಂತಳು.
ಈಕೆಯನ್ನು ಹುಡುಕಿಕೊಂಡು ಜಾಹೀರಾತುಗಳು ಬರಲು ಮುಂದಾದವು. ಇದರಿಂದ ಈಕೆಗೆ ಹೆಸರು ಮತ್ತು ಹಣ ಎರಡು ಲಭ್ಯವಾಯಿತು. ಮನುಷ್ಯನಿಗೆ ಎಷ್ಟಿದ್ದರೂ ಸಾಲದು ಆಸೆ ಎಂಬುದು ಯಾರನ್ನು ಬಿಡುವುದಿಲ್ಲ ಎಂಬುದಕ್ಕೆ ಈಕೆ ಒಂದು ಉದಾಹರಣೆ. ಪ್ರಸಿದ್ಧಿ ಪಡೆದರು ಕೈ ತುಂಬಾ ಹಣ ಬಂದರೂ ಇನ್ನೂ ಹೆಚ್ಚು ಹಣಕ್ಕಾಗಿ ನೀಚ ಕೆಲಸಕ್ಕೆ ಮುಂದಾಗುತ್ತಾಳೆ.
ಕೆಲವು ದಿನಗಳ ಹಿಂದೆ ಉದ್ಯಮಿ ಒಬ್ಬರು ಜಾಹೀರಾತನ್ನು ಕೊಡುವುದಕ್ಕಾಗಿ ಈಕೆಯನ್ನು ಭೇಟಿಯಾಗುತ್ತಾರೆ. ಆತ ಹಣವಂತ ಎಂದು ತಿಳಿದ ನಂತರ ನಮ್ರ ಆತನ ವಿರುದ್ಧ ಸ್ಕೆಚ್ ಅನ್ನು ಹಾಕುತ್ತಾಳೆ. ಸಲುಗೆಯಿಂದ ಮಾತನಾಡಿಸಿಕೊಂಡು ಆತನನ್ನು ಹೋಟೆಲ್ ಒಂದಕ್ಕೆ ಕರೆಸಿಕೊಳ್ಳುತ್ತಾಳೆ. ಹೋಟೆಲ್ ನಲ್ಲಿ ಆತನಿಗೆ ಕಂಠಪೂರ್ತಿ ಕುಡಿಸಿ ಆತ ಮಲಗಿದ ನಂತರ ಈಕೆಯೂ ಸಹ ಪಕ್ಕದಲ್ಲಿ ಮಲಗಿ ವಿಡಿಯೋಗಳನ್ನು ಚಿತ್ರಿಸಿಕೊಂಡಿರುತ್ತಾಳೆ. ಇಂತಹ ಸಂದರ್ಭದಲ್ಲಿ ನಮ್ರಾಳಿಗೆ ಆಕೆಯ ಗಂಡನೇ ಸಹಾಯ ಮಾಡಿರುತ್ತಾನಂತೆ.
ಚಿತ್ರಿಸಿಕೊಂಡಿರುವ ವಿಡಿಯೋಗಳನ್ನು ಇಟ್ಟುಕೊಂಡು ಈಕೆ ತನ್ನ ಅಸಲಿ ಕಹಾನಿಯನ್ನು ಶುರು ಮಾಡುತ್ತಾಳೆ. ಮೊದಲಿಗೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುತ್ತೇನೆ ಎಂದು ಹೇಳಿ ಲಕ್ಷ ಲಕ್ಷ ಹಣ ಕ್ಕೆ ಬೇಡಿಕೆ ಇಡುತ್ತಾಳೆ. ಗಾಬರಿಗೊಂಡ ಉದ್ಯಮಿ ಹಣ ನೀಡಿರುತ್ತಾನೆ. ಇನ್ನೂ ಹೆಚ್ಚು ಹಣ ಬೇಕೆಂಬ ಆಸೆಗೆ ಬಿದ್ದ ನಮ್ರ ಮತ್ತು ಆಕೆಯ ಗಂಡ ಮತ್ತೆ ಉದ್ಯಮಿಯ ಬಳಿ ಹಣಕ್ಕೆ ಬೇಡಿಕೆ ಇಡಲು ಮುಂದಾಗುತ್ತಾರೆ ಕೊಡದಿದ್ದಲ್ಲಿ ವಿಡಿಯೋ ಆಧಾರದ ಮೇಲೆ ರೇಪ್ ಕೇಸ್ ದಾಖಲಿಸುವುದಾಗಿ ಬೆದರಿಸಿರುತ್ತಾರೆ.
ಈ ಸಂದರ್ಭದಲ್ಲಿ ಅವರು ಕೇಳಿರುವುದು 80 ಲಕ್ಷವಾಗಿರುತ್ತದೆ. ಗಾಬರಿಗೊಂಡ ಉದ್ಯಮಿ ದಿಕ್ಕು ತೋಚದೆ ಠಾಣೆಯ ಮೆಟ್ಟಿಲೇರುತ್ತಾನೆ. ಉದ್ಯಮಿ ನಡೆದ ಎಲ್ಲಾ ಘಟನೆಯನ್ನು ಪೊಲೀಸರ ಬಳಿ ವಿವರಿಸಿ ತನಗಾಗಿರುವ ಅನ್ಯಾಯದ ಬಗ್ಗೆ ಹಾಗೂ ಈತನು ಈಗಾಗಲೇ ನೀಡಿರುವ ಹಣದ ಬಗ್ಗೆ ಮತ್ತು ಆಕೆ ನಡೆಸಿರುವ ಹನಿ ಟ್ರ್ಯಾಪ್ ನ ಸಂಪೂರ್ಣ ಕಹಾನಿಯನ್ನು ವಿವರಿಸಿರುತ್ತಾನೆ. ಈತನ ದೂರಿನ ಆಧಾರದ ಮೇಲೆ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸುತ್ತಾರೆ ಆಗಲೇ ಇನ್ನಷ್ಟು ಅಚ್ಚರಿಯ ವಿಚಾರಗಳು ಹೊರ ಬೀಳುತ್ತವೆ.
ಅದೇನೆಂದರೆ ಈಕೆ ಹನಿ ಟ್ರ್ಯಾಪ್ ಮಾಡಿರುವುದು ಈ ಉದ್ಯಮಿಗೆ ಮೊದಲೇನಲ್ಲ. ಈಕೆಯ ಫೋನಿನಲ್ಲಿ ಸಾಕಷ್ಟು ಉದ್ಯಮಿಗಳ ವಿಡಿಯೋಗಳು ಸಹ ಇವೆ ಎಂದು ತನಿಕೆಯಲ್ಲಿ ಬೆಳಕಿಗೆ ಬಂದಿರುತ್ತದೆ.
ಸದ್ಯ ಪೋಲೀಸರು ನಮ್ರ ವಿರುದ್ಧ ದೂರನ್ನು ದಾಖಲಿಸಿ, ಈಕೆಯನ್ನು ಜೈಲಿಗೆಟ್ಟಿದ್ದಾರೆ ಹಾಗೂ ಈಕೆಗೆ ಸಾತ್ ನೀಡುತ್ತಿದ್ದ ಈಕೆಯ ಗಂಡನ ವಿರುದ್ಧ ದೂರು ದಾಖಲಾಗಿದ್ದು ಆತ ತಲೆಮರಿಸಿಕೊಂಡಿರುತ್ತಾನೆ.