ಪಂಚಯತ್ ರಾಜ್ ಇಂಜಿನಿಯರಿಂಗ್ ಇತಿಹಾಸದಲ್ಲೆ ವರ್ಕ್ ಆರ್ಡರ್ ಗೆ ಕಮಿಷನ್ ನೀಡಿದ ಇತಿಹಾಸವಿಲ್ಲ.ಆದರೆ ಇಂಜಿನಿಯರ್ ಗೀತಾ ಮೇಡಂ ತನ್ನ ಸಾಹೇಬರ ಮೆಚ್ಚುಗೆಗಾಗಿ ಹೊಸ ಕಮಿಷನ್ ಗೆ ದಂಧೆಗೆ ಮುನ್ನುಡಿ ಬರೆದು ವರ್ಕ್ ಆರ್ಡರ್ ಗೆ ಹೆಚ್ಚುವರಿ ಕಮಿಷನ್ ಅನ್ನು ಗುತ್ತಿಗೆದಾರರಿಂದ ವಸೂಲಿ ಮಾಡುತ್ತಿದ್ದಾರೆ .ಆದರೆ ಈ ಕಮಿಷನ್‌ ಅಮರಪ್ಪನರಿಗೆ ಹೋಗುತ್ತಿಲ್ಲ ಎಂಬುದು ಅವರದೇ ಕಚೇರಿಯ ಸಿಬ್ಬಂದಿಗಳ ಅಂಬೋಣ .
ಹಾಗಾದರೆ ಅ ಕಮಿಷನ್ ದಂಧೆಯ ಹಣ ಯಾರ ಮನೆ ಸೇರುತ್ತಿದೆ?ಯಾರ ತಿಜೋರಿ ಸೇರುತ್ತಿದೆ ಎಂಬುದೆ ಯಕ್ಷ ಪ್ರಶ್ನೆ..!!? ಇನ್ನೂ ಇದೇ ಗೀತಾ ಮೇಡಂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಗೆ ಬಂದ‌ ನಂತರ ಹೊಸ ವರಸೆ ಶುರು ಮಾಡಿದ್ದಾರೆ ಅದೇನೆಂದರೆ ವರ್ಕ್ ಡನ್ ಸರ್ಟಿಫಿಕೇಟ್ ಇಲ್ಲದ ಗುತ್ತಿಗೆದಾರರಿಗೂ ಕಾಮಗಾರಿಯ ಕಾರ್ಯದೇಶ ಕೊಡಿಸಿದ್ದಾರೆ ಎಂದರೆ ನಿಜಕ್ಕೂ ಪಂಚಾಯತ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಗೀತಾ ಮೇಡಂ ಕ್ವಿನ್ ಎಲಿಜಬೆತ್ ಎಂದರೆ ತಪ್ಪಲ್ಲ!!

ಅಜೀಂ ಪ್ರೇಮ್ ಜಿ 60 ಕೋಟಿ ಕಥೆ!!
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅಜೀಂಪ್ರೇಮಿ ಜಿ ರವರು 60 ಕೋಟಿ ನೀಡಿರುವ ಅನುದಾನದಲ್ಲೂ ಗೀತಾ ಮೇಡಂ ಪ್ಯಾಕೇಜ್ ಮಾಡಿ ಗುತ್ತಿಗಡದಾರರ ಬಳಿ ವಸೂಲಿಗೆ ಇಳಿದಿದ್ದಾರೆ ಎನ್ನುವುದು ಗುತ್ತಿಗೆದಾರರ ಸಂಕಟಕ್ಕೆ ಕಾರಣವಾಗಿದೆ..ಹಾಗೂ ಇದೇ ಸರ್ಕಾರಿ ಶಾಲೆಗಳಲ್ಲಿ ವಿವೇಕ ಕೊಠಡಿ ಶಾಲೆಗಳ ನಿರ್ಮಾಣಕ್ಕೆ ಸರ್ಕಾರ ನೀಡಿರುವ ಅನುದಾನದಲ್ಲು ಗೀತಾ ಮೇಡಂ ತನ್ನ ಕೈ ಚಳಕ ತೋರಿ ಗುತ್ತಿಗೆದಾರರಿಗೆ ಗೋಳು ಹಾಕಿಕೊಳ್ಳುತ್ತಿರುವುದು ನೋಡಿದರೆ ಮೇಡಂಗೆ ಹಣದ ದಾಹ,ಹಣದ ಮೋಹದ ಇಳಿದಿಲ್ಲ ಎಂದೆನಿಸುತ್ತದೆ..

ಗುತ್ತಿಗೆದಾರರಿಂದ ವಸೂಲಿಗೆ ಡಬಲ್ ಗೇಮ್!!?
ಗುತ್ತಿಗೆದಾರರು ಕಾಮಗಾರಿಯನ್ನ ಗುತ್ತಿಗೆ ಪಡಿಯಲು ಟೆಂಡರ್ ನಲ್ಲಿ ಭಾಗವಹಿಸಬೇಕು ಅದಕ್ಕಾಗಿ ಅವರು ಬಿಡ್ ಮಾಡಬೇಕು ಉದಾಹರಣೆಗೆ 10 ಲಕ್ಷದ ಕಾಮಗಾರಿಗೆ ಬಿಡ್ ಮಾಡುವಾಗ 2 % ಕಡಿಮೆ ಹೋಗಿ ಒಬ್ಬ ಗುತ್ತಿದಾರ ಬಿಡ್ ಮಾಡಿದ್ದರೆ ಮತ್ತೋರ್ವ3% ಕಡಿಮೆ ಹೋಗಿ ಬಿಡ್ ಮಾಡಿದರೆ ಅವನಿಗೆ ಕಾಮಗಾರಿ ಸಿಗುತ್ತದೆ .ಇದನ್ನೆ ಬಂಡವಾಳ ಮಾಡಿಕೊಂಡಿರುವ ಗೀತಾ ಮೇಡಂ ಇಬ್ಬರೂ ಗುತ್ತಿಗೆದಾರರನ್ನ ಕರೆದು ಒಬ್ಬರಿಗೆ 3% ಬಿಲೋ ಬಿಡ್ ಮಾಡು ಎಂದು,ಮತ್ತೊಬ್ಬ ಗುತ್ತಿಗೆದಾರನಿಗೆ 4% ಕಡಿಮೆ ಬಿಡ್ ಮಾಡು ಎಂದು ಹೇಳಿಕೊಡುತ್ತಾರಂತೆ ತದನಂತರ ಬಿಡ್ ನಲ್ಲಿ ಯಶಸ್ವಿಯಾದ ಗುತ್ತಿಗೆದಾರರನ್ನ ಕರೆದು ನಾವು ಹೇಳಿಲ್ವ ಹೀಗೆ ಮಾಡು ಅಂತ ಅದಕ್ಕೆ ನಿನಗೆ ಕಾಮಗಾರಿ ಸಿಕ್ಕೆದೆ ಎಂದು ಹೊಸ ವರಸೆ ಶುರು ಮಾಡಿ ಅವನಿಂದಲು ಅದಕ್ಕೂ ಪ್ರತ್ಯೇಕ ಕಮಿಷನ್ ವಸೂಲಿ ಮಾಡುವ ಹೊಸ ಸಂಪ್ರದಾಯಕ್ಕೆ ಗೀತಾ ಅಂಡ್ ಟೀಂ ಮುನ್ನುಡಿ ಬರೆದಿದೆ…!! ಹೀಗೆ ಆನೇಕಲ್ ಗುತ್ತಿಗೆದಾರರೂಬ್ಬರಿಗೆ ಎರೆಡು ಕೆಲಸ ಮಾಡಿ ಕೊಡುತ್ತೇನೆ ಎಂದು ನಾಮ ಎಳೆದ ಪರಿಣಾಮದಿಂದ ದೊಡ್ಡ ರಗಳೆಯಾಗಿ ಈಗ ಅವರೊಂದಿದೆ ಒಳಗೊಳಗೆ ಕೈ ಕಾಲು ಹಿಡಿಯುವ ರಾಜಿ ಪಂಚಾಯತಿ ನಡಿಯುತ್ತಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ.ಇದು ಎಷ್ಟು ಸತ್ಯವೋ? ಎಷ್ಟು ಸುಳ್ಳೋ? ಕ್ವಿನ್ ಎಲಿಜಬೆತ್ ಗೀತಾ ಮೇಡಂ ರವರೆ ಸ್ಪಷ್ಟಪಡಿಸಬೇಕಿದೆ.ಇವರನ್ನ ಹೀಗೆ ಬಿಟ್ಟರೆ ಇನ್ನೂ ಯಾವುದಕ್ಕೆಲ್ಲ ವಸೂಲಿ ಮಾಡುತ್ತಾರೋ? ಗೊತ್ತಿಲ್ಲ.ಈಗಲೂ ಅಮರಪ್ಪನವರು ಈ ವಸೂಲಿ ಕ್ವಿನ್ ಗೀತಾ ಮೇಡಂನ ಆಟಟೋಪಗಳಿಂದ ಎಚ್ಚರಗೊಳ್ಳದೆ ಹೋದರೆ ನಿಮ್ಮ ಗೌರವಕ್ಕೆ ಚ್ಯುತಿ ತರುವುದರಲ್ಲಿ ಯಾವುದೇ ಅನುಮಾನವಿಲ್ಲ…!!!

error: Content is protected !!