ಕುಂದಗೋಳ; ತಾಲೂಕಿನ ಗುರುವಿನ ಹಳ್ಳಿ ಗ್ರಾಮದ ಶಿವಳ್ಳಿ ನಗರ ಓಣಿಯ ಸಾರ್ವಜನಿಕರು ಕಾಂಕ್ರೀಟ್ ರಸ್ತೆ ಇಲ್ಲದೇ ಕಷ್ಟ ಅನುಭವಿಸುತ್ತಿದ್ದು, ಮಳೆಗಾಲದ ಸಂದರ್ಭದಲ್ಲಿ ಕೆಸರಲ್ಲಿ ಓಡಾಡಬೇಕಾದ ಪರಿಸ್ಥಿತಿ ಎದುರಿಸಬೇಕಾಗುತ್ತದೆ.

ಕಳೆದ ಹಲವಾರು ವರ್ಷಗಳಿಂದ ಸಿಸಿ ರಸ್ತೆ ಇಲ್ಲದೆ ಪರದಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಕೆಲಸ ಕಾರ್ಯಗಳಿಗೆ ಹೊರಡಬೇಕಾದ ಅನಿವಾರ್ಯತೆಯಲ್ಲಿ, ಕೆಸರಲ್ಲಿ ನಡೆದುಕೊಂಡು ಹೋಗಬೇಕಾದ ಸ್ಥಿತಿ ಬಂದೊದಗಿದೆ, ಈ ಕುರಿತು ಇಲ್ಲಿನ ನಿವಾಸಿಗಳು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ಎಷ್ಟೋ ಬಾರಿ ಮೌಖಿಕವಾಗಿ ಮನವಿ ಸಲ್ಲಿಸಿದರು ಇಲ್ಲಿನ ಅಧಿಕಾರಿಗಳು ನಮಗೂ ಇದಕ್ಕೂ ಏನು ಸಂಬಂಧವೆ ಇಲ್ಲ ಎನ್ನುವ ಹಾಗೆ ವರ್ತಿಸುವುದು ಎಷ್ಟರಮಟ್ಟಿಗೆ ಸರಿ ಹೇಳಿ?

ಇನ್ನೂ ರಸ್ತೆ ಪಕ್ಕ ಚರಂಡಿ ಕೂಡ ನಿರ್ಮಾಣವಾಗಿಲ್ಲ ಮಳೆಗಾಲದಲ್ಲಿ ನೀರು ಮನೆಗಳಿಗೆ ನುಗ್ಗಿ ಇಲ್ಲಿನ ನಿವಾಸಗಳು ತ್ರೀವ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಇದ್ಯಾವುದೂ ಅಧಿಕಾರಿಗಳ ಗಮನಕ್ಕೆ ಬಂದಿಲವ್ವಾ? ವಿಠಲಾಪೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹೊರವಲಯದಲ್ಲಿ ಇರುವುದರಿಂದ ಇಲ್ಲಿ ಯಾವುದೇ ಸಮಸ್ಯೆ ಇಲ್ಲ ಅಂತ ಸುಮ್ಮನೆ ಕೊತ ಬಿಟ್ಟಾರಾ?

ಕೂಡಲೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ಎಚ್ಚರಗೊಂಡು ಇಲ್ಲಿನ ನಿವಾಸಿಗಳ ಕಷ್ಟ ಅರಿತು ಸಮರ್ಪಕ ರಸ್ತೆ ಕಲ್ಪಿಸಬೇಕೆಂದು ಇಲ್ಲಿನ ನಿವಾಸಿಗಳ ಅಗ್ರಹವಾಗಿದೆ.

 

ಈ ವರ್ಷದ ಕ್ರಿಯಾ ಯೋಜನೆಯಲ್ಲಿ ಶಿವಳ್ಳಿ ನಗರ ಇಲ್ಲ. ಆದ್ಯತೆ ಇರುವುದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಅಧ್ಯಕ್ಷರು ಸರ್ವಸದಸ್ಯರು ಗಮನಕ್ಕೆ ತೆಗೆದುಕೊಂಡು. ಕಾಂಕ್ರೀಟ್ ರಸ್ತೆ ಕಲ್ಪಸುತ್ತೇವೆ. – ಕವಿತಾ ಕೂಡ್ಲಿವಾಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ವರದಿ;ಶಾನು ಯಲಿಗಾರ

error: Content is protected !!