ಸಕಲೇಶಪುರದ ಕಾಫಿ ತೋಟಕ್ಕೆ ಕೂಲಿ ಕೆಲಸಕ್ಕೆ ಬಂದಿದ್ದ 14 ವರ್ಷದ ಬಾಲಕಿಯ ಮೇಲೆ ತೋಟದ ಮಾಲೀಕ ಮತ್ತು ಇಬ್ಬರು ಸಂಬಂಧಿಗಳು ಸೇರಿ ಮೂವರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಕಾಫಿ ಬೀಜಗಳನ್ನು ಬಿಡಿಸಲು ತೋಟಕ್ಕೆ ಪೋಷಕರೊಂದಿಗೆ ಬಂದಿದ್ದ 14 ವರ್ಷದ ಬಾಲಕಿಯ ಮೇಲೆ ತೋಟದ ಮಾಲೀಕ ಮತ್ತು ಸಂಬಂಧಿಕರು ಅತ್ಯಾಚಾರ ಮಾಡಿ ಬಾಯಿಬಿಡದಂತೆ ಜೀವ ಬೆದರಿಕೆ ಹಾಕಿದ್ದರು.
ಬಾಲಕಿ ಕೂಲಿ ಕೆಲಸಕ್ಕೆ ಬಂದಿರುವಾಗ ವಾಂತಿ ಮಾಡಿಕೊಂಡಿದ್ದಾಳೆ. ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಗರ್ಭಿಣಿ ಆಗಿರುವುದು ಪತ್ತೆಯಾಗಿದೆ. ಪೋಷಕರು ಕೇಳಿದಾಗ ತೋಟದ ಮಾಲೀಕ ಸ್ವಾಗತ್ ಮತ್ತವರ ಸಂಬಂಧಿಕರಾದ ಸುದರ್ಶನ್, ಪಾಪಣ್ಣ ಅತ್ಯಾಚಾರ ಮಾಡಿದ ವಿಚಾರವನ್ನು ಬಾಯಿ ಬಿಟ್ಟಿದ್ದಾಳೆ.
ಆರೋಪಿಗಳಾದ ಸ್ವಾಗತ್, ಸುದರ್ಶನ್ ಮತ್ತು ಪಾಪಣ್ಣ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಯನ್ನು ಮಕ್ಕಳ ರಕ್ಷಣಾ ಸಮಿತಿಯ ಕೇಂದ್ರದಲ್ಲಿ ಇರಿಸಲಾಗಿದೆ.