ಕುಂದಗೋಳ; ತಾಲೂಕಿನ ಮುಳಹಳ್ಳಿ ಗ್ರಾಮದಲ್ಲಿ ನೀರು ಸರಬರಾಜು ಮಾಡುವು ಟ್ಯಾಂಕರ್ ಶಿಥಿಲಾವ್ಯವಸ್ಥೆ ತಲುಪಿದೆ. ನಿತ್ಯ ಸರಬರಾಜು ಮಾಡುವ ಟ್ಯಾಂಕರ್ ದುಸ್ಥಿತಿ ಇದ್ದು, ಟ್ಯಾಂಕರ್ ಮೆಟ್ಟಲುಗಳ ಸಿಮೆಂಟ್ ಮೇಲೆ ಪದರು ಉದುರಿ ಕಬ್ಬಣ ತುಂಡಗಳು ಕಾಣತೊಡಗಿವೆ.

2007 ರಲ್ಲಿ ನಿರ್ಮಿಸಿದ ನೀರಿನ ಟ್ಯಾಂಕರ್ ಸದ್ಯ ಸಿಮೆಂಟ್, ಕಬ್ಬಿಣದ ಪದರುಗಳು ಉದುರಿ ನೆಲಕ್ಕೆ ತಾಗುತ್ತಿದ್ದು, ಇಲ್ಲಿನ ಜನರಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ.

ನಿತ್ಯ ನೀರು ಸರಬರಾಜು ಮಾಡುವ ಟ್ಯಾಂಕರ್ ಶಿಥಿಲಾವ್ಯವಸ್ಥೆ ತಲುಪಿದರು ಅಧಿಕಾರಿಗಳು ಮಾತ್ರ ನಮಗೂ ಇದಕ್ಕೂ ಏನು ಸಂಬಂಧ ಇಲ್ಲದ ಹಾಗೆ ವರ್ತಿಸುವುದು ಎಷ್ಟರ ಮಟ್ಟಿಗೆ ಸರಿ ಹೇಳಿ.

ಈಗಲಾದರೋ ಎಚ್ಚೆತ್ತುಕೊಂಡು ಶಿಥಿಲಾವ್ಯವಸ್ಥೆಯಲ್ಲಿ ಇದ್ದಾ ನೀರಿನ ಟ್ಯಾಂಕರ್ ದುರಸ್ತಿ ಭಾಗ್ಯ ಒದಗಿಸಬೇಕು ಅಂತ ಇಲ್ಲಿ ಜನರ ಆಗ್ರಹ ವಾಗಿದೆ.

ವರದಿ; ಶಾನು ಯಲಿಗಾರ

error: Content is protected !!