ಕುಂದಗೋಳ; ಗ್ರಾಮೀಣ ಭಾಗದಲ್ಲಿ ಸ್ವಚ್ಛ ಮತ್ತು ಸುಂದರವಾಗಿ ವಾತಾವರಣ ನಿರ್ಮಾಣ ಮಾಡಲು ಸ್ವಚ್ಚ ಭಾರತ ಮಿಷನ್ ಯೋಜನೆಯಡಿಯಲ್ಲಿ ಸ್ವಚ್ಛತೆಗೆ ಕೇಂದ್ರ ಸರಕಾರ ಮೊದಲ ಆದ್ಯತೆ ನೀಡಿದೆ.

ಅದರನ್ವಯ ಎಲ್ಲಡೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕಷ್ಟು ಹಣ ವಿನಿಯೋಗಿಸಲು ಸ್ವಚ್ಛತೆಗೆ ಸರಕಾರ ಬಿಡುಗಡೆಗೊಳಿಸಿದರು. ಗ್ರಾಮ ಪಂಚಾಯತ್ ಆಡಳಿತ ವರ್ಗದವರು ಸ್ವಚ್ಛತೆ ನಿರ್ವಹಣೆ ಮಾಡಲು ಮೀನಾಮೇಷ ಮಾಡುತ್ತಿದ್ದು ಈ ಕಸದ ರಾಶಿನಿ ಕಾರಣ ಅಂತ ಸ್ಪಷ್ಟ ಕಾಣತೊಡಗಿದೆ.

ಕುಂದಗೋಳ ತಾಲೂಕಿನ ಸಂಶಿ ಹೋಬಳಿ ಎಪಿಎಂಸಿ ಕಾಂಪೌಂಡ್ ಹತ್ತಿರ ಕಸದ ರಾಶಿ ಬಿದ್ದು ಗ್ರಾಮದ ಸ್ವಚ್ಚತೆ ಮರಚೀಕೆಯಾಗಿದೆ. ಕುಂದಗೋಳದಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ಸಂಪರ್ಕಸಿವು ರಸ್ತೆ ಮಾರ್ಗ ಮದ್ಯ ಸಂಶಿ ಗ್ರಾಮದ ಮುಂಭಾಗದಲ್ಲಿ ಕಸದ ರಾಶಿ ಬಿದ್ದು ಗ್ರಾಮಕ್ಕೆ ಕಳಂಕ ತರುವುದರಲ್ಲಿ ಏನು ಸಂದೇಹವೇ ಇಲ್ಲ. ಅನ್ನುವು ಹಾಗೇ ಕಾಣುತ್ತಿತ್ತು.

ಇತ್ತೀಚೆಗೆ ದಿನ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಸಂಶಿ ಗ್ರಾಮಕ್ಕೆ ಕನಕದಾಸರ ಜಯಂತಿ ಅಂಗವಾಗಿ ಕಾರ್ಯಕ್ರಮಕ್ಕೆ ಎಂಟ್ರಿ ಕೊಡವು ಮೊದಲು ಈ ಕಸದ ರಾಶಿ ಸ್ವಾಗತಕ್ಕೆ ತುಂಬಿಕೊಂಡಿತ್ತಾ? ಅನ್ನುವುದು ಈ ಕಸದ ರಾಶಿ ತಾಜಾ ಉದಾಹರಣೆ ಅಂದರೆ ತಪ್ಪಾಗಲಾರದು.

ಕಸದ ರಾಶಿಯಲ್ಲಿ ಪ್ಲಾಸ್ಟಿಕ್ ಹಾಳೆಗಳು, ತ್ಯಾಜ್ಯ ವಸ್ತುಗಳು, ಟೆಟ್ರಾ ಪ್ಯಾಕೇಟ್ ಗಳು ಸಾಕಷ್ಟು ಪ್ರಮಾಣದಲ್ಲಿ ಬಿದ್ದು ದುರ್ವಾಸನೆ ಎಡೆ ಮಾಡಿಕೊಟ್ಟಿದೆ. ಸಂಶಿ ಗ್ರಾಮಕ್ಕೆ ಎಂಟ್ರಿ ಆದ ತಕ್ಷಣವೇ ಈ ಕಸದ ರಾಶಿ ಪ್ರಯಾಣಿಕರಿಗೆ ಸ್ವಾಗತಿಸಲು ಬಿಟ್ಟಿದ್ದಾರೆ ಅನ್ನುವುದು ಸಾರ್ವಜನಿಕರ ಯುಕ್ಷಪ್ರಶ್ನೆಯಾಗಿ ಉಳಿದಿದೆ. ಈಗಲಾದರೋ ಎಚ್ಚೆತ್ತುಕೂಳ್ಳತಾರೋ ಅಥವಾ ಗಾಡ ನಿದ್ರೆಯಲ್ಲಿ ನಿದ್ರೆಸುತಾರೋ ಕಾದು ನೋಡಬೇಕಾಗಿದೆ.

ವರದಿ; ಶಾನು ಯಲಿಗಾರ

error: Content is protected !!