ಕುಂದಗೋಳ: ಶುದ್ದ ಕುಡಿಯುವ ನೀರಿನ ಘಟಕ ಕೆಟ್ಟು ಹಲವಾರು ವರ್ಷ ಕಳೆದರೂ ದುರಸ್ತಿ ಕೈಗೊಳ್ಳ ದ್ದರಿಂದ ಚಿಕ್ಕನರ್ತಿ ಗ್ರಾಮಸ್ಥರು ಕುಡಿಯುವ ನೀರಿಗೆ ಅಲೆದಾಡುವಂತಾಗಿದೆ. ಪರ ಊರಿಗೆ ತೆರಳಿ ನೀರು ತರುವಂತಾಗಿದ್ದು. ಅಧಿಕಾರಿಗಳು ಕುಡಿಯುವ ನೀರಿನ ಘಟಕ ದುರಸ್ತಿ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ನಿರ್ಮಾಣಗೂಂಡು ಕೆಲವು ದಿನಗಳ ಹಿಂದೆ ಶುದ್ದ ನೀರಿನ ಘಟಕ ಕಾರ್ಯನಿರ್ವಹಿಸುತ್ತು, ಸದ್ಯ ಒಂದೂವರೆ ವರ್ಷದಿಂದಲೇ ಸ್ಥಗಿತಗೊಂಡಿದೆ. ಹಾಗಾದರೆ ಗ್ರಾಮ ಪಂಚಾಯಿತ್ ಆಡಳಿತ ಮಂಡಳಿ ಗಮನಕ್ಕೆ ಬಂದಿಲವ್ವಾ?

ಈ ಗ್ರಾಮದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಒಂದೇ ಒಂದೇ ಶುದ್ದ ಕುಡಿಯುವ ನೀರಿನ ಘಟಕ ಇರುವುದರಿಂದ ಇಲ್ಲಿನ ಗ್ರಾಮಸ್ಥರು ಯರಗುಪ್ಪಿ, ಹಿರೇನರ್ತಿ, ಕುಂದಗೋಳ ಹೀಗೆ ಗ್ರಾಮಗಳಿಗೆ ತೆರಳಿ ಶುದ್ದ ನೀರು ತೆಗೆದುಕೊಂಡು ಬರ್ತಾ ಇದ್ದರೆ ಇದ್ಯಾವುದೂ ಅಧಿಕಾರಿಗಳಿಗೆ, ಗ್ರಾಪಂ ಸದಸ್ಯರ ಗಮನಕ್ಕೆ ಬರದೇ ಇರುವುದಕ್ಕೆ ಕಾರಣವಾದರೂ ಏನು?

ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಗೂಡೌಣದಲ್ಲಿ ನಿರ್ಮಸಿಲಾಗಿದ ಶುದ್ದ ನೀರಿನ ಘಟಕ ಪಾಳು ಬಿದ್ದು, ನಿರ್ವಹಣೆ ಇಲ್ಲದೆ ಇಲ್ಲಿರುವುದರಿಂದ ಸಲಕರಣೆಗಳು ತುಕ್ಕು ಹಿಡಿಯಲು ಪ್ರಾರಂಭಸಿವೆ.

ಇಷ್ಟೇಲ್ಲಾ ಸಮಸ್ಯೆ ಗಳು ತೆಲೆದೊರಿದರು ಇಲ್ಲಿನ ಗ್ರಾಪಂ ಅಧಿಕಾರಿಗಳು, ಸದಸ್ಯರುಗಳು ತೆಲೆ ಕೆಳಗೆ ಮಾಡಿ ಮೌನ ರಥ ಹಮ್ಮಿಕೊಂಡಿದ್ದಾರ? ಎಂದು ಕಾಣಸುತ್ತೇ. ಈ ಕೂಡಲೇ ಎಚ್ಚತುಕೂಂಡು ಸಾರ್ವಜನಿಕ ದಾಹ ತೀರಿಸಲು ಪ್ರಯತ್ನಿಸುತ್ತಾರೋ ಇಲವೋ ಕಾದು ನೋಡಬೇಕು.

ವರದಿ; ಶಾನು ಯಲಿಗಾರ

error: Content is protected !!