ಕುಂದಗೋಳ; ಕೆರೆಗಳು ಮನುಷ್ಯರ ಜೀವನಾಡಿ ದಿನಬಳಕೆ ಬೇಕಾದ ಸಂಪನ್ಮೂಲ, ಹಾಗೇ ಇಲ್ಲೊಂದು ಕೆರೆ ಹಸಿ ಕಸ ಬೆಳೆದು ದುರ್ವಾಸನೆ ಎಡೆ ಮಾಡಿಕೊಟ್ಟಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗಳ ಸಹಾಯದಿಂದ ನೀರು ಶೇಖರಣೆ ಮಾಡಿಕೊಂಡು ವರ್ಷಪೂರ್ತಿ ನೀರು ಕುಡಿಯಲು ಕೆರೆಗಳು ಸಹಕಾರಿಯಾಗಿದೆ. ವಿಜ್ಞಾನದ ಪ್ರಕಾರ ಉತ್ತಮ ಮಳೆಯಾಗಲು, ಅಂತರ್ಜಾಲ ಮಟ್ಟ ಸುಧಾರಿಸಲು ಕೆರೆ ಕಟ್ಟೆಗಳು ಬಹಳಷ್ಟು ಉಪಯೋಗಕಾರಿ ಅಂತ ನಾವು ನಿಜಜೀವನದಲ್ಲಿ ಕಂಡು ಕೊಂಡಿದ್ದವೆ.

ಕೆರೆಗಳ ಅಭಿವೃದ್ಧಿಗೆ ಸರಕಾರದಿಂದ ಹಣ ಹಂತ ಹಂತವಾಗಿ ಬಿಡುಗಡೆಗೊಳಸುತ್ತೆ. ಹಾಗಾಗಿ ಕೆರೆಗಳ ಅಂತರ್ಜಾಲ ಮಟ್ಟ ಸುಧಾರಿಸಲು, ಕೆರೆಗಳ ಹೂಳು ತೆಗೆಯುವುದು, ಕೆರೆಗಳ ಸ್ವಚ್ಚತೆ ಕಾಪಾಡುವುದು, ಕೆರೆಗಳ ಸಂರಕ್ಷಣೆ ಮಾಡುವುದು, ಇಷ್ಟೇಲ್ಲಾ ಕೆರೆಗಳ ಅಭಿವೃದ್ಧಿಗೆ ಕೇಂದ್ರ ಸರಕಾರದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸಹಕಾರಿಯಾಗಿದೆ.

ಆದರೆ ಇಲ್ಲೊಂದು ಗ್ರಾಮ ಮೆಲ್ಲೆಲ್ಲ ತುಳುಕು ಒಳಗೆಲ್ಲಾ ಹುಳುಕು ಅಂತ ಸ್ಪಷ್ಟವಾಗಿ ಕಾಣುತ್ತದೆ ಅಂದರೆ ತಪ್ಪಾಗಿಕ್ಕಿಲ್ಲ. ಹಾಗಾದರೆ ಯಾವು ಗ್ರಾಮ ಅಂತ ಕೇಳ್ತೀರಾ? ಇಲ್ಲಿದೆ ಕಂಪ್ಲೀಟ್ ಕಹಾನಿ.

ಧಾರವಾಡ ಜಿಲ್ಲಾ ಕುಂದಗೋಳ ತಾಲೂಕಿನ ಕುಬಿಹಾಳ ಗ್ರಾಮದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಬರೋಬ್ಬರಿ ಅಂದಾಜು ಮೊತ್ತ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿಗೆ ಈಗಾಗಲೇ ಖರ್ಚು ಮಾಡಲಾಗಿದೆ.

ಕೆರೆಗಳು ಅಭಿವೃದ್ಧಿಗೊಂಡರೆ ನೀರಿನ ಅಂತರ್ಜಾಲ ಮಟ್ಟ ಸುಧಾರಿಸಲು ಸಹಾಯಕವಾಗುತ್ತದೆ ಅಂದರೆ ನಮ್ಮ ನಿಮ್ಮೆಲ್ಲರಿಗೂ ಗೊತ್ತಿರುವ ವಿಚಾರ. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಯಾರಿಗೂ ಕಾಣುವುದಿಲ್ಲ. ಹಾಗೆ ಆಗಿರುವ ವಿಚಾರ ಇದು, ಕೆರೆಯ ಸುತ್ತಲೂ ಪೀರ್ವಸ್ ಅಳವಡಿಕೆ ಮಾಡಿದ್ದಾರೆ, ಇದರ ಜೊತೆಗೆ ಸುತ್ತಲೂ ತಂತಿ ಬೇಲಿ, ಸೋಲಾರ್ ಲೈಟ್ ಗಳು ಅಳವಡಿಸಿ ದ್ದಾರೆ. ಆದರೆ ಇವೆಲ್ಲವೂ ಕಾಮಗಾರಿ ಅವೈಜ್ಞಾನಿಕ ದಿಂದ ಕೊಡಿದೆ.

ಕೆರೆ ಸುತ್ತಲೂ ಹಾಕಲಾಗಿದ ಪೀವರ್ಸ್ ಗಳು ಕಿತ್ತು ನೆಲ್ಲಕ್ಕಿ ಧಾವಿಸಿವೆ. ಇನ್ನೂ ತಂತಿ ಬೇಲಿ ಕಿತ್ತು ನಿಂತಿದೆ೦. ಕೆರೆ ಒಳಾಂಗಣದಲ್ಲಿ ಹಸಿ ಕಸ ಎದ್ದು ಕಲುಷಿತ ವಾತಾವರಣ ಸೃಷ್ಟಿಸಿದೆ.

ಇನ್ನೂ ಕೆರೆ ಹೊರ ಭಾಗದಲ್ಲಿ ನೋಡಿದರೆ ಸಾಕು ಬಣ್ಣದ ಲೇಪನದಿಂದ ಕಂಗೊಳಿಸುತ್ತೆ. ಜೊತೆಗೆ ಕರೆ ಭಾಗದಲ್ಲಿ ಕಲ್ಲು ಪಿಚ್ಚಿಂಗ್ ಮಾಡಲಾಗಿದೆ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವು ಹಾಗೆ ಈ ಕೆರೆ ಆವೃತ್ತಿಗೊಂಡಿದೆ, ಇಷ್ಟೆಲ್ಲಾ ಸಮಸ್ಯೆಗಳು ಕಾಣ ತೊಡಗಿದರು ಈ ಅಧಿಕಾರಿಗಳು ನಿರ್ವಹಣೆ ಮಾಡದೇ ಕಚೇರಿಗೆ ಸೀಮತವಾದರ? ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ತೊಡಗಿದೆ. ಒಟ್ಟಿನಲ್ಲಿ ಗ್ರಾಪಂ ನಿರ್ವಹಣೆಯಲ್ಲಿ ಎಡವಿದೆ ಅಂತ ಗೋಚರವಾಗುತ್ತದೆ.

ವರದಿ; ಶಾನು ಯಲಿಗಾರ

error: Content is protected !!