ಕುಂದಗೋಳ; ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ 5000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಎರಡು ಶುದ್ದ ನೀರಿನ ಘಟಕ ಇದ್ದು, ಒಂದೇ ಮಾತ್ರ ಕಾರ್ಯನಿರ್ವಹಿಸುತ್ತಿದ್ದು. ಸಾರ್ವಜನಿಕರಿಗೆ ತ್ರೀವ ತೊಂದರೆ ಉಂಟಾಗಿದೆ.

ಹಾಗಾಗಿ ಗ್ರಾಮದಲ್ಲಿ ಶುದ್ದ ನೀರಿನ ಘಟಕ ಕೊರತೆ ಇದ್ದು ಇದ್ಯಾವುದೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಗಮನಕ್ಕೆ ಬಂದಿಲವ್ವಾ? ಸರಕಾರ ಕುಡಿಯುವ ನೀರಿಗೆ ಸಾಕಷ್ಟು ಹಣ ಸಂದಾಯ ಮಾಡಿದರೂ, ಇವರುಗಳು ಮಾಡೋದು ಆದರೂ ಏನು? ಹೀಗೆ ಸಾರ್ವಜನಿಕರು ಅಧಿಕಾರಿಗಳು ವಿರುದ್ದ ಕಿಡಿ ಕಾಡಿದರು.

ಅಭಿವೃದ್ಧಿ ಅಧಿಕಾರಿಗಳು ಮೂಲಭೂತ ಸೌಕರ್ಯಗಳು ಒದಗಿಸುವುದರಲ್ಲಿ ವಿಫಲರಾಗಿದ್ದಾರೆ. ಅಂತ ಸ್ಪಷ್ಟವಾಗಿ ಕಾಣುತ್ತದೆ. ಗ್ರಾಮದಲ್ಲಿ ಎಲ್ಲಡೆ ಕಸದ ರಾಶಿಗಳು, ಗಟಾರು ಸ್ವಚ್ಚತೆ ಗ್ರಾಮದಲ್ಲಿ ಮರಿಚೇಕೆ ಎದ್ದು ಕಾಣುತ್ತಿದ್ದರು. ಇದ್ಯಾವುದೂಕ್ಕೂ ಕ್ಯಾರೆ ಅನ್ನುತ್ತಿಲ್ಲ ಪಿಡಿಓ ಸಾಹೇಬ್ರರು.

ಮೀಟ್ಂಗ್ ಗೆ ಪ್ರಸೆಂಟ್. ಕಛೇರಿಗೆ ಆಬ್ಸೆಂಟ್ ಪ್ರಿಯರಾದ ಯರಗುಪ್ಪಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು? ಹೀಗೆ ನಾನರೀತಿ ಪ್ರಶ್ನೆಗಳು ಕಾಡ್ತಾ ಇದೆ. ಈ ಕುರಿತು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಉತ್ತರ ನೀಡಬೇಕು.

ವರದಿ;ಶಾನು ಯಲಿಗಾರ

error: Content is protected !!