ಬೀದರ್ ಜಿಲ್ಲೆ ಚಿಟಗುಪ್ಪ ಪಟ್ಟಣದಿಂದ ಕೆಲವು ಹಳ್ಳಿಗಳಿಗೆ ಸರಿಯಾಗಿ ಬಸ್ಸುಗಳ ವ್ಯವಸ್ಥೆ ಇಲ್ಲ. ಆ ಬಸ್ಸುಗಳು ಇದ್ದರೂ ಸರಿಯಾದ ಸಮಯಕ್ಕೆ ಬರೋದೇ ಇಲ್ಲ. ಪ್ರತಿನಿತ್ಯ ಹಳ್ಳಿಗಳಿಂದ ನೂರಾರು ವಿದ್ಯಾರ್ಥಿನಿಯರು ಶಾಲೆಗೆ ಬರುತ್ತಾರೆ. ಅದರಲ್ಲಿ ಮುಖ್ಯವಾಗಿ ಮಾಡಗೋಳ ಗ್ರಾಮದ ವಿದ್ಯಾರ್ಥಿನಿಯರು ಗೋಳಂತೂ ಕೇಳೋರೆ ಇಲ್ಲ. ಏಕೆಂದರೆ ಬೆಳಗ್ಗೆ ಒಂದು ಬಸ್ಸು ಬರುತ್ತೆ ಒಂದೊಂದು ಸರ್ತಿ ಬರುವುದು ಇಲ್ಲ.ಸಾಯಂಕಾಲ 5:00ಗೆ ಬರುತ್ತೆ ಒಂದೊಂದು ಸಾರಿ 8 ಗಂಟೆ 9 ಗಂಟೆಗೂ ಕೂಡ ಬರುತ್ತೆ. ನಮ್ಮ ಸಮಸ್ಯೆಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ವಿದ್ಯಾರ್ಥಿನಿಯರ ಒಂದು ಮನವಿಯಾಗಿದೆ.ನಂತರ ವರದಿಗಾರರ ಜೊತೆಯಲ್ಲಿ ಮಾತನಾಡಿದ ಲಕ್ಷ್ಮಿ ಎನ್ನುವ ವಿದ್ಯಾರ್ಥಿನಿ ಸರ್ ನಾನು ಕನ್ಯಾ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದೇನೆ. ನಮ್ಮ ಗ್ರಾಮಕ್ಕೆ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲ. ಮತ್ತು ಸರಿಯಾದ ಸಮಯಕ್ಕೆ ಶಾಲೆಗೆ ಹೋಗೋಕೆ ಆಗ್ತಾ ಇಲ್ಲ. ದಯವಿಟ್ಟು ನಮಗೆ ಬಸ್ಸಿನ ವ್ಯವಸ್ಥೆಯನ್ನು ಮಾಡಿ ಕೊಡಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಬೇಡಿಕೊಳ್ಳುತ್ತಿದ್ದೇನೆ.

ವರದಿ: ಧನರಾಜ್.ಬಿ.ಬುದಾರಿ

error: Content is protected !!