ಉತ್ತರಕನ್ನಡ ಜಿಲ್ಲೆಯಲ್ಲಿ ಬರುವ ಯಲ್ಲಾಪುರದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಬಸ್ಟೆಂಡಿನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರು ಕಣ್ಣು ಮುಚ್ಚಿ ಕುಳಿತ KSRTC ಸಿಬ್ಬಂದಿ
ವ್ಯಕ್ತಿಯೊಬ್ಬನು ಕಂಠ ಪೂರ್ತಿ ಕುಡಿದು ಸಾರ್ವಜನಿಕ ಸ್ಥಳವಾದ ಬಸ್ಟೆಂಡಿನಲ್ಲಿ ಬಿಂದಾಸ್ ಆಗಿ ಮಲಗಿದ್ದು ಯಾರೂ ಹೇಳುವವರು ಇಲ್ಲ ಕೇಳುವವರು ಇಲ್ಲ ಎನ್ನುವಂತಾಗಿದೆ .
ಅಲ್ಲೇ ಪಕ್ಕದಲ್ಲಿ ಎಲ್ಲಿಂದೊ ಬಂದ ವೃದ್ದೆ ಕುಡುಕನ ಜೇಬಿಗೆ ಕೈ ಹಾಕಿ ಹಣವನ್ನು ಕದ್ದು ಅಲ್ಲಿಂದ ಪರಾರಿಯಾಗಿದ್ದಾಳೆ.
ಇದನ್ನು ಕಂಡ ಸಾರ್ವಜನಿಕರು ವೃದ್ದೆ ಮಾಡಿದ್ದು ಸರಿಯಾಗಿದೆ ಎಂದು ಅಭಿಪ್ರಾಯ ಪಟ್ಟರೆ ಇನ್ನುಳಿದವರು ಸಿಬ್ಬಂದಿಗಳ ನಿರ್ಲಕ್ಷತನ ಹಾಗೂ ಕಂಠ ಪೂರ್ತಿ ಕುಡಿದು ಇಲ್ಲೇ ಮಲಗಿದ್ದರು K S R T C ಯಾವ ಸಿಬ್ಬಂದಿಯೂ ಗಮನ ಹರಿಸಿಲ್ಲ ಎನ್ನಲಾಗಿದೆ.
ವರದಿ; ಶ್ರೀಪಾದ್ ಎಸ್ ಏಚ್