ಧಾರವಾಡ : ಧಾರವಾಡ ಜಿಲ್ಲೆಯ ಬಹುತೇಕ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳು ದುರಸ್ತಿಯಾಗುವುದು ಯಾವಾಗ….? ಇದು ಧಾರವಾಡ ಜಿಲ್ಲೆಯ ಗಡಿಭಾಗದಲ್ಲಿ ಕವಲಗೇರಿಯಿಂದ ಅಮ್ಮಿನಭಾವಿ ಹೊಗಿ ತಲುಪುವ ಒಳ ರಾಜ್ಯ ಹೆದ್ದಾರಿ _28. ಇದಾಗಿದ್ದು ಇದು ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿದ್ದು ಅಧಿಕಾರಿಗಳ ಕಣ್ಣಿನಲ್ಲಿ ಮರೆಯಾಗಿರುವುದು ಬೆಸರದ ಸಂಗತಿ . ಈ ಮಾರ್ಗವಾಗಿ ಸಾಕಷ್ಟು ವಾಹನಗಳು ಸಂಚಾರವಾಗುತ್ತಿದ್ದು ಅನಾರೋಗ್ಯ ಪೀಡಿತರು ಗರ್ಬಣಿ ಸ್ತ್ರೀಯರು ಈ ಮಾರ್ಗವಾಗಿಯೇ ವಾಣಿಜ್ಯ ನಗರಿ ಹುಬ್ಬಳ್ಳಿ ಬಂದು ತಲುಪಬೇಕಾದರೆ ಅವರು ಪಡುವ ಕಷ್ಟ ಹೇಳತಿರದು. ಆದ್ದರಿಂದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಶೀಘ್ರವಾಗಿ ಇತ್ತ ಗಮನ ಹರಸಿ ರಸ್ತೆ ದುರಸ್ತಿ ಪಡಿಸಿ ಸಾರ್ವಜನಿಕ ಜೀವನಕ್ಮೆ ಈ ದಿನ ನಿತ್ಯದ ನರಕ ಯಾತನೆಯಿಂದ ಮಕ್ತಿ ನಿಡುವರೊ ಅಥವಾ ಇಲ್ಲೊ ಕಾದು ನೋಡಬೇಕು..

ವರದಿ : ಚರಂತಯ್ಯ ಹಿರೇಮಠ

error: Content is protected !!