ಪ್ರೇಮಿಗಳ ದಿನದ ಗೌರವಾರ್ಥವಾಗಿ ಸಿಡ್ನಿ ಜೋಡಿಯೊಂದು ಮೈಮರೆತು ವರ್ತಿಸಿದೆ. ಉತ್ತರ ಸಿಡ್ನಿ ಉಪನಗರಗಳಾದ ನಾರ್ಮಹರ್ಸ್ಟ್ ಮತ್ತು ಗಾರ್ಡನ್ ನಡುವೆ ರೈಲು ಸಾಗುವಾಗ ಘಟನೆ ನಡೆದಿದೆ. ರೈಲಿನಲ್ಲಿದ್ದ ಪ್ರಯಾಣಿಕರು ಮುಜುಗರಕ್ಕೆ ಒಳಗಾಗಿದ್ದಾರೆ. ಗಾಬರಿಗೊಂಡ ಪ್ರಯಾಣಿಕರು ಈ ಜೋಡಿಯ ಸಾರ್ವಜನಿಕ ಪ್ರೀತಿಯ ಪ್ರದರ್ಶನವನ್ನು ತಡೆಯುವಂತೆ ಹೇಳಿದ್ದಾರೆ.
Couple caught getting naked and performing sex acts on crowded Valentine’s day train 😳 pic.twitter.com/T0rgylWqJy
— Daily Loud (@DailyLoud) February 17, 2023
ಅಸಹ್ಯಕರ ದೃಶ್ಯ ನೋಡಲು ಮುಜುಗರವಾಗಿ ನಾನು ಅಲ್ಲಿಂದ ದೂರ ಹೋದೆ ಎಂದು ಪ್ರಯಾಣಿಕರೊಬ್ಬರು ಹೇಳಿದ್ದು, ವಿಡಿಯೋ ದೃಶ್ಯಾವಳಿಗಳಲ್ಲಿ, ಧ್ವನಿವರ್ಧಕದಲ್ಲಿನ ಧ್ವನಿಯು ಜೋಡಿಗೆ ತಮ್ಮ ಅನುಚಿತ ವರ್ತನೆ ನಿಲ್ಲಿಸುವಂತೆ ಮತ್ತು ದಯವಿಟ್ಟು ಬಟ್ಟೆಗಳನ್ನು ಧರಿಸುವಂತೆ ಮನವಿ ಮಾಡುವುದನ್ನು ಕೇಳಬಹುದು. ಆದರೂ ಕಾಮದ ಮದದಲ್ಲಿ ಮೈಮರೆತ ಜೋಡಿ ಲೈಂಗಿಕ ಕ್ರಿಯೆ ಮುಂದುವರೆಸಿದ್ದು, ಕಾವಲುಗಾರ ಮಧ್ಯಪ್ರವೇಶಿಸಿ ಅವರಿಗೆ ಎಚ್ಚರಿಸಿ, ನಿಮ್ಮ ನಡವಳಿಕೆಯು ಆಕ್ಷೇಪಾರ್ಹವಾಗಿದೆ ಎಂದು ಹೇಳಿದರು.