ಮಗನನ್ನೆ ಬಂದೂಕಿನಿಂದ ಗುಂಡಿಟ್ಟು ತಂದೆ ಹತ್ಯೆ ಮಾಡಿರುವಂತಹ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಟ್ಟೆಮಾಡು ಗ್ರಾಮದಲ್ಲಿ ನಡೆದಿದೆ. ತಂದೆ ನಂದೇಟಿರ ಚಿಟ್ಟಿಯಪ್ಪನಿಂದ ಪುತ್ರ ನಿರೆನ್(28) ಹತ್ಯೆ ಮಾಡಲಾಗಿದೆ. ಪುತ್ರನನ್ನು ಹತ್ಯೆಗೈದು ತಂದೆ ಪೊಲೀಸರಿಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆ ಪುತ್ರನನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.