ಇದೇ ತಿಂಗಳ 14ನೇ ತಾರೀಕಿನಂದು ಸ್ನೇಹಿತರ ಮಧ್ಯೆ ಐಫೋನ್ ವಿಚಾರಕ್ಕಾಗಿ ಜಗಳ ವಾಗಿದ್ದು ಮೈಸೂರು ನಗರದ ತಾವರೆಕಟ್ಟೆಯ ಬಳಿ ತಾವರೆಕೆರೆಯ ಪಕ್ಕದ ಖಾಲಿ ಜಾಗದಲ್ಲಿ ನಿತಿನ್ ಎಂಬ ಯುವಕನನ್ನು ಆತನ ಸ್ನೇಹಿತರೆ ಕೊಲೆ ಮಾಡಿರುವಂತಹ ಘಟನೆ ನಡೆದಿರುತ್ತದೆ. 14ನೇ ತಾರೀಕು ನಿತಿನ್ ಹಾಗೂ ಆತನ ಇಬ್ಬರು ಸ್ನೇಹಿತರು ಮದ್ಯಾ ಸೇವಿಸಿದ್ದು ನಂತರ ಇವರುಗಳ ಮಧ್ಯೆ ಐಫೋನ್ ವಿಚಾರಕ್ಕಾಗಿ ಗಲಾಟೆ ಆರಂಭವಾಗಿದ್ದು, ಇಬ್ಬರು ಸ್ನೇಹಿತರು ನಿತಿನನ್ನು ತಾವರೆಕೆರೆಯ ಪಕ್ಕದಲ್ಲಿರುವ ಕಾಲಿ ಜಾಗಕ್ಕೆ ಕರೆತಂದು ಅವನ ತಲೆಯ ಮೇಲೆ ಕಲ್ಲನ್ನು ಎತ್ತಿ ಹಾಕಿ ಕೊಲೆ ಮಾಡಿರುತ್ತಾರೆ.
ಈ ವಿಚಾರವಾಗಿ ನಜರಾಬಾದ್ ಪೊಲೀಸರು 15ನೇ ತಾರೀಖಿನಂದು ನಿತಿನ್ನ ಇಬ್ಬರು ಸ್ನೇಹಿತರನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸಿದಾಗ ಅವರುಗಳೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ.
ಐಫೋನ್ ವಿಚಾರಕ್ಕಾಗಿ ನಡೆದ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.
ಘಟನೆ ನಡೆದ ಒಂದೇ ದಿನಕ್ಕೆ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಪತ್ತೆ ಹಚ್ಚಿರುವ ನಜರಾಬಾದ್ ಪೊಲೀಸರನ್ನು ಮೈಸೂರು ನಗರ ಪೊಲೀಸ್ ಆಯುಕ್ತರು ಪ್ರಶಂಸಿರುತ್ತಾರೆ.