ರಾಜಸ್ಥಾನದ ಬುಂದಿ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಸೊಸೆಯನ್ನು ಪ್ರೀತಿಸಿ ಆಕೆಯೊಂದಿಗೆ ಓಡಿಹೋಗಿದ್ದಾನೆ. ಬುಂದಿ ಜಿಲ್ಲೆಯ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿಲೋರ್ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ.
ತಂದೆ, ಪತ್ನಿಯೊಂದಿಗೆ ಓಡಿ ಹೋಗಿರುವ ವಿಷಯ ತಿಳಿದ ಮಗ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ತಮ್ಮ ತಂದೆ ಓಡಿಹೋಗುವ ಮುನ್ನ ಬೈಕ್ ಕದ್ದಿದ್ದಾರೆ ಎಂದು ಆರೋಪಿಸಿದ್ದಾನೆ.
ಸಂತ್ರಸ್ತನನ್ನು ಪವನ್ ವೈರಾಗಿ ಎಂದು ಗುರುತಿಸಲಾಗಿದ್ದು, ತನ್ನ ತಂದೆ ರಮೇಶ್ ವೈರಾಗಿ ತನ್ನ ಪತ್ನಿಯೊಂದಿಗೆ ಓಡಿ ಹೋಗಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದಾನೆ. ತಂದೆ ಹೆಂಡತಿಯನ್ನು ತನ್ನಿಂದ ದೂರ ಮಾಡಿದ್ದಾನೆ ಎಂದು ಪವನ್ ಆರೋಪಿಸಿದ್ದಾನೆ.
ಪವನ್ ಅವರಿಗೆ ಆರು ತಿಂಗಳ ಮಗಳಿದ್ದಾಳೆ. ಈ ಹಿಂದೆಯೂ ತನ್ನ ತಂದೆ ರಮೇಶ್ ಅಕ್ರಮ ಎಸಗುತ್ತಿದ್ದರು ಎಂದು ಆರೋಪಿಸಿದ್ದಾನೆ. ಪವನ್ ಪ್ರಕಾರ ಅವನ ತಂದೆ ತನ್ನ ಬೈಕನ್ನು ಕದ್ದು ಹೆಂಡತಿಯೊಂದಿಗೆ ಓಡಿಹೋಗಿದ್ದಾರೆ. ಅಲ್ಲದೇ ಪತ್ನಿ ಅಮಾಯಕಿಯಾಗಿದ್ದು ಆಕೆ ತಂದೆಯಿಂದ ಮೋಸ ಹೋಗಿದ್ದಾಳೆ ಎಂದು ಹೇಳಿದ್ದಾನೆ.
ದೂರು ದಾಖಲಿಸಿದ ನಂತರ, ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಪವನ್ ಆರೋಪಿಸಿದ್ದಾನೆ.