ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲೂಕಿನ ಪುರಸಭೆಯ ವಾರ್ಡ್ ನಂ 21 ಸಮಸ್ಯೆಗಳ ಆಗರವಾಗಿ ಪರಿಣಮಿಸಿದೆ ಹಾಗಾಗಿ ಅಲ್ಲಿಯ ನಿವಾಸಿಗಳು ಸಮಸ್ಯೆಗಳ ಪರಿಹಾರಕ್ಕಾಗಿ ಪುರಸಭೆಯ ಅಧಿಕಾರಿಗಳಿಗೆ ಮನವಿ ಪತ್ರವೊಂದನ್ನು ಸಲ್ಲಿಸಿದ್ದಾರೆ.
ಇದು ಬೇರೆ ಯಾವ ಕ್ಷೇತ್ರವು ಅಲ್ಲ, ನಮ್ಮ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸ್ವಕ್ಷೇತ್ರ, ಈ ಕ್ಷೇತ್ರದ ಶಿಗ್ಗಾವಿಯ ಜಯನಗರದಲ್ಲಿ ಒಂದೆರಡು ಸಮಸ್ಯೆಗಳಿಲ್ಲ ಕಿತ್ತು ಹೋದ ರಸ್ತೆಗಳು, ಅಸ್ತವ್ಯಸ್ತಗೊಂಡಿರುವ ಚರಂಡಿ ವ್ಯವಸ್ಥೆ, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಚೀಲಗಳ ರಾಶಿಗಳು, ಕೊಳಚೆ ನೀರು ಹೀಗೆ ಪಟ್ಟಿಹೀಗೆ ಪಟ್ಟಿ ಮಾಡುತ್ತಾ ಹೋದರೆ ನೂರಾರು ಸಮಸ್ಯೆಗಳು.
ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಪುರಸಭೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಇತ್ತ ಕಡೆ ತಲೆ ಹಾಕಿಲ್ಲ, ಹಾಗಂತ ಸ್ಥಳೀಯ ನಿವಾಸಿಗಳು ಸುಮ್ಮನೆ ಕುಳಿತಿಲ್ಲ ಹಲವಾರು ಬಾರಿ ಮನವಿ ಪತ್ರ ಕೊಡುತ್ತಲೇ ಇದ್ದಾರೆ ಹಾಗಿದ್ದರೂ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡಿಲ್ಲ.
ಸಾರ್ವಜನಿಕರ ತೆರಿಗೆ ಹಣದಲ್ಲಿ ವೇತನ ಪಡೆದು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ನೀವೆಂತಹ ಅಧಿಕಾರಿಗಳು ಸ್ವಾಮಿ?
ಇನ್ನೂ, ಜನಪ್ರತಿನಿಧಿಗಳ ಬಗ್ಗೆ ಹೇಳುವುದಾದರೆ ಚುನಾವಣೆ ಹತ್ತಿರ ಬಂದಾಗ ಮನೆ ಮನೆಗೆ ತೆರಳಿ ಕೈಕಾಲು ಹಿಡಿದು ಮತ ಪಡೆದು ಆಯ್ಕೆಯಾಗಿ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ಕಚೇರಿಗೆ ಹೋಗಿ ಕುರ್ಚಿ ಮೇಲೆ ಕುಳಿತು ದರ್ಪ ತೋರಿ ಬರುತ್ತಿದ್ದಾರೆ ಅನಿಸುತ್ತಿದೆ ಯಾಕಂದ್ರೆ ಇಷ್ಟೊಂದು ಸಮಸ್ಯೆಗಳ ಆಗರವೇ ಇದ್ರೂ ತಮ್ಮನ್ನು ಆಯ್ಕೆ ಮಾಡಿದ ಮತದಾರರು ಏನೆಂದಾರು ಅನ್ನುವ ಕಿಂಚಿತ್ತು ಪರಿಜ್ಞಾನವು ಇಲ್ಲದಂತೆ ಸುಮ್ಮನಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-04 ರ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಈ ರಸ್ತೆಗೆ ಹೊಂದಿಕೊಂಡಿರುವ ಕಾಲುವೆಗಳಲ್ಲಿ ಹೂಳು ತುಂಬಿಕೊಂಡು ನೀರು ಸರಾಗವಾಗಿ ಹರಿಯದೆ ರಸ್ತೆಯ ಮೇಲೆ ನಿಂತು ರಸ್ತೆಗಳು ಹಾಳಾಗುತ್ತಿವೆ ಇದರಿಂದ ಸುತ್ತಮುತ್ತಲಿನ ನಿವಾಸಿಗಳು ಪ್ರತಿದಿನ ದೂಳಿನಲ್ಲಿಯೇ ವಾಸಿಸಬೇಕಾದ ಪ್ರಸಂಗ ಒದಗಿ ಬಂದಿದೆ.
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಬೇಕಾಗಿದೆ.
ವರದಿ :ಮಂಜುನಾಥ ಹರಿಜನ

error: Content is protected !!