ಕುಂದಗೋಳ: ಬಳಕೆಗೂ ಬರೆದ, ಉಪಯೋಗಕ್ಕೆ ಮೊದಲೇ ಇಲ್ಲಿದ, ಪಾಳು ಬಿದ್ದು, ದೃಷ್ಟಿಗೆ ಮಾತ್ರ ಎದ್ದು ಕಾಣುವ ಈ ಸಾರ್ವಜನಿಕ ಶೌಚಾಲಯ ಪರಿಸ್ಥಿತಿ ನಾವು ಹೇಳ್ತೀವಿ ಕೇಳಿ.
ಕುಂದಗೋಳ ಪಟ್ಟಣದ ಗುಡೇನಕಟ್ಟಿ ಮತ್ತು ಯರಗುಪ್ಪಿ ರಸ್ತೆ ಬದಿಯಲ್ಲಿ ನಿರ್ಮಿಸಲಾಗಿದ ಸಾರ್ವಜನಿಕ ಶೌಚಾಲಯ ಕಥೆ ಇದು. ಸ್ವಚ್ಚ & ಸುಂದರ ವಾತಾವರಣ ನಿರ್ಮಾಣ ಮಾಡಬೇಕೆಂದು ಸರಕಾರ ಲಕ್ಷಾಂತರ ರೂಪಾಯಿ ವ್ಯಯ ಮಾಡಿ ನಿರ್ಮಿಸಿರುವ ಈ ಶೌಚಾಲಯ ಪಾಳು ಬಿದ್ದಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಸ್ವಚ್ಚ ಭಾರತ ನಿರ್ಮಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಾನ ಹೆಸರುಗಳಲ್ಲಿ ನೂರಾರು ಯೋಜನೆಗಳನ್ನು ಘೋಷಿಸಿವೆ. ಆದರೂ ನಗರ ಪ್ರದೇಶಗಳಲ್ಲಿ ಸ್ವಚ್ಚತೆ ಮರೀಚಿಕೆಯಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಟ್ಟಿದ ಶೌಚಾಲಯಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದವೆ. ಮೇಲ್ಚಾವಣಿ ಒಡೆದು ಹಾಳಾಗಿದೆ. ಸರ್ಮಪಕ ನೀರು ಸಂಪರ್ಕ ಇಲ್ಲದೆ ಶೌಚಾಲಯ ಪಾಳು ಬಿದ್ದಿದೆ. ಇದರಿಂದ ಬಯಲು ಬಹಿರ್ದೆಸೆ ಪ್ರವೃತ್ತಿ ಮುಂದುವರಿದ್ದಿದೆ. ಪಟ್ಟಣದಲ್ಲಿ ಬಹುಮುಖ್ಯವಾಗಿ ಬೇಕಾಗಿರುವುದು ಸಾರ್ವಜನಿಕ ಶೌಚಾಲಯ.
ಸ್ವಚ್ಛತೆ ಹಾಗೂ ಉತ್ತಮ ಆರೋಗ್ಯಕ್ಕಾಗಿ ಸಾರ್ವಜನಿಕ ಶೌಚಾಲಯ ಬಳಸಿ, ಚಿಕ್ಕವರಾಗಲಿ/ದೊಡ್ಡವರಾಗಲಿ ಎಲ್ಲರೂ ಶೌಚಾಲಯ ಬಳಸುವವರಾಗಲಿ, ಮಕ್ಕಳಿಗೆ ಶೌಚಾಲಯ ಬಳಿಕೆಯ ರೂಡಿ ಮಾಡಿಸಿ. ಶೌಚಾ ಮಾಡಿದ ಬಳಿಕೆ ಕಡ್ಡಾಯವಾಗಿ ಸಾಬೂನಿನಿಂದ ಕೈ ಕಾಲು ತೊಳೆಯರಿ ಹೀಗೆ ಸಾರ್ವಜನಿಕ ಶೌಚಾಲಯದಲ್ಲಿ ಜಾಹೀರಾತು ಮುಖಾಂತರ ಜನರಿಗೆ ತಿಳುವಳಿಕೆ ನೀಡುವ ಸರಕಾರ ಪಾಳುಬಿದ್ದಿರುವ ಶೌಚಾಲಯವನ್ನು ದುರಸ್ತಿ ಮಾಡಿಸಲು ಮಾತ್ರ ಹಿಂದೇಟು ಹಾಕುತ್ತಿದೆ. ಅಧಿಕಾರಿಗಳು ಇದನ್ನು ಕಂಡರೂ ಕಾಣದಂತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಟ್ಟಣ ಪಂಚಾಯಿತಿ ಅಧಿಕಾರಿ ಪಟ್ಟಣದಲ್ಲಿ ಎರಡು ಸಾರ್ವಜನಿಕ ಶೌಚಾಲಯ ಇದ್ದು ಅವುಗಳ ದುರಸ್ತಿಗೆ ಈಗಾಗಲೇ ಯೋಜನೆ ಕೈಗೊಂಡಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗುತ್ತದೆ ಎಂದಿದ್ದಾರೆ.
ವರದಿ: ಶಾನು ಯಲಿಗಾರ

error: Content is protected !!