ಅಸ್ಸಾಂನ ನಾಗಾಂವ್‌ನ ಮುಸ್ಲಿಂ ವ್ಯಕ್ತಿಯೊಬ್ಬ ತಾನು ಹಿಂದೂ ಎಂದು ಹೇಳಿಕೊಂಡು, ಹೆಸರು ಬದಲಿಸಿ ಹಿಂದೂ ಯುವತಿಯೊಂದಿಗೆ ಕೇರಳಕ್ಕೆ ಪರಾರಿಯಾಗಿದ್ದಾನೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಜಾಗೃತರಾಗಿ ಕ್ರಮ ಕೈಗೊಂಡಿದ್ದಾರೆ. ವ್ಯಕ್ತಿಯನ್ನು ಬಂಧಿಸಲಾಗಿದ್ದು, ಓಡಿಹೋದ ಹುಡುಗಿಯನ್ನು ರಕ್ಷಿಸಲಾಗಿದೆ. ವರದಿಗಳ ಪ್ರಕಾರ, ನಾಗಾಂವ್‌ನ ಲೈಲೂರಿಯಿಂದ ವಿವಾಹಿತ ವ್ಯಕ್ತಿ ಮತ್ತು ಮೂರು ಮಕ್ಕಳ ತಂದೆ ರಮಿಜುಲ್ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತನ್ನ ಹೆಸರನ್ನು ಮುನ್ನಾ ಗೊಗೋಯ್ ಎಂದು ಬದಲಾಯಿಸಿಕೊಂಡಿದ್ದ. ನಂತರ ನಾಗಾಂವ್ ನವರಾದ ಪೂಜಾ ಬೋರಾ ಅವರೊಂದಿಗೆ ಓಡಿಹೋಗಿದ್ದ. ಈ ವ್ಯಕ್ತಿ ಎರಡು ತಿಂಗಳಿನಿಂದ ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ಈ ಸಂಬಂಧ ಪೂಜಾ ಬೋರಾ ಅವರ ತಾಯಿ ನಾಗಾಂವ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ಕೇರಳಕ್ಕೆ ತೆರಳಿ ರಮಿಜುಲ್ ನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನಾಗಾಂವ್ ಗೆ ಕರೆತರುವ ಮೊದಲು ಕೇರಳದ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪೂಜಾ ಬೋರಾಳನ್ನೂ ಕೇರಳದಿಂದ ಕರೆತರಲಾಗಿದೆ. ಪೊಲೀಸರ ಪ್ರಕಾರ, ರಮಿಜುಲ್ ತನ್ನ ಹೆಸರನ್ನು ಫೇಸ್‌ಬುಕ್‌ನಲ್ಲಿ ಮುನ್ನಾ ಗೊಗೊಯ್ ಎಂದು ಬದಲಾಯಿಸಿಕೊಂಡಿದ್ದಾನೆ ಮತ್ತು ನಾಗಾಂವ್ ನಲ್ಲಿ ಪೂಜಾ ಬೋರಾ ಎಂಬ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದ್ದ. ಈತ ಆಕೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ. ಇವರಿಬ್ಬರು ಕೇರಳಕ್ಕೆ ಓಡಿ ಎರಡು ತಿಂಗಳ ಕಾಲ ತಲೆಮರೆಸಿಕೊಂಡಿದ್ದರು. ಕೇರಳದ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ರಮಿಜುಲ್ ಪರಾರಿಯಾಗಲು ಪ್ರಯತ್ನಿಸಿದ್ದ, ನಂತರ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.