ಉತ್ತರ ಕನ್ನಡ:  ಜಿಲ್ಲೆಯ ಭಟ್ಕಳ ತಾಲೂಕಿನ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓಂ ಬೀಚ್ ರಸ್ತೆಯಲ್ಲಿ ಪ್ರವಾಸಿಗರಿಗೆ ಮಾದಕ ವಸ್ತು ಹಾಗೂ ಚರಸ್ ಅನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದವರನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.
ಬಂಧಿತರಿಂದ 10 ಲಕ್ಷ ರೂಪಾಯಿ ಮೌಲ್ಯದ ಒಂದೂವರೆ ಕೆಜಿಗೂ ಅಧಿಕ ಮೌಲ್ಯದ ಚರಸ್ ಅನ್ನು ಹಾಗೂ ಒಂದು ದ್ವಿಚಕ್ರ ವಾಹನ ಮತ್ತು 2 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗೋಕರ್ಣದ ಬೇಲಿ ಹಿತ್ತಲು ನಿವಾಸಿ ತುಳಸು ಹಮ್ಮು ಗೌಡ, ಮೂಲೆಕೇರಿ ನಿವಾಸಿ ಶ್ರೀಧರ್ ಗೌಡ ಹಾಗೂ ಕೂಡ್ಲ ನಿವಾಸಿ ಸಂತ ಬಹದ್ದೂರ್ ತಮಂಗ್ ಅವರೇ ಬಂಧಿತ ಆರೋಪಿಗಳಾಗಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ ಟಿ ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ಭಟ್ಕಳ ಡಿವೈಎಸ್ಪಿ ಶ್ರೀಕಾಂತ್, ಗೋಕರ್ಣ ನಿರೀಕ್ಷಕ ಮಂಜುನಾಥ ಎಮ್, ಉಪನಿರೀಕ್ಷಕ ಹರೀಶ್ ಹೆಚ್‌ ವಿ, ಪಿಎಸ್ಐ ಸಕ್ತಿವೇಲು, ಎಎಸ್ಐ ಅರವಿಂದ ಶೇಟ್ ಹಾಗೂ ಸಿಬ್ಬಂದಿಗಳಾದ ವಸಂತ ನಾಯ್ಕ, ರಾಜೇಶ್ ನಾಯ್ಕ, ಸಚಿನ್ ನಾಯ್ಕ್, ನಾಗರಾಜ ನಾಯ್ಕ, ಜಿ ಬಿ ರಾಣೆ, ಕಿರಣ್ ಕುಮಾರ್, ಗಣೇಶ್ ದಾಸರ್ ಅವರು ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿ :ಮಂಜುನಾಥ ಹರಿಜನ

error: Content is protected !!