ರಾಜ್ಯದಲ್ಲಿ ಮಳೆ ಆರ್ಭಟ, ಬುಧವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ವಿವಿಧ ಜಿಲ್ಲೆಗಳ ವ್ಯಾಪ್ತಿಯಲ್ಲಿ ಜೋರು ಮಳೆ ಆಗಿದೆ. ಹಲವೆಡೆ ಗುಡುಗು ಸಹಿತ ಮಳೆ ದಾಖಲಾಗಿದೆ. ಧಾರವಾಡ, ಕಲಘಟಗಿ, ಹಾವೇರಿ, ಬೆಂಗಳೂರಿನ ಒಂದೆರಡು ಪ್ರದೇಶ, ಹುಬ್ಬಳ್ಳಿ ಸೇರಿದಂತೆ ವಿವಿಧ ಭಾಗದಲ್ಲಿ ಮಳೆ ದಾಖಲಾಗಿದೆ.
ರಾಜ್ಯದ ವಿವಿಧೆಡೆ ಬೆಳಗ್ಗೆಯಿಂದ ಕಂಡು ಬಂದ ಬಿಸಿಲು ಮಧ್ಯಾಹ್ನದ ವೇಳೆ ಮರೆಯಾಗಿತ್ತು. ಸಂಜೆ ನಂತರ ಗುಡುಗು ಮಿಂಚು ಸಹಿತ ಅನೇಕ ಕಡೆಗಳಲ್ಲಿ ಆರ್ಭಟಿಸಿತು. ಹಾವೇರಿಯ ಹಲವೆಡೆ ಆಲಿಕಲ್ಲು ಸಹಿತ ಜೋರು ಮಳೆ ಆಗಿದೆ. ಜೋರು ಗಾಳಿ ಬೀಸಿದೆ. ಕಲಘಟಗಿಯಲ್ಲೂ ಮಳೆ ಬಿದ್ದಿದೆ. ಹೀಗೆ ಸಾಕಷ್ಟು ಜಿಲ್ಲೆಗಳಲ್ಲಿ ಮಳೆ ಅಬ್ಬರ ಮುಂದುವರಿದಿದೆ.
ಅಲ್ಲದೇ ಮುಂದಿನ ಮೂರು ದಿನ ಕರಾವಳಿ ಭಾಗದ ಜಿಲ್ಲೆಗಳು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗ ಸಹಿತ ಜೋರು ಮಳೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.