ಕರ್ನಾಟಕದ ಬಿಡದಿಯ ಆಶ್ರಮದಿಂದ ಪರಾರಿಯಾಗಿ ತನ್ನದೇ ಆದ ವಿಶ್ವದ ಪ್ರಥಮ ಹಿಂದೂ ರಾಷ್ಟ್ರ ಕೈಲಾಸ ದೇಶವನ್ನು ಸ್ಥಾಪಿಸಿಕೊಂಡಿದ್ದೇನೆ ಎಂದು ಹೇಳುತ್ತಿರುವ ಸ್ವಾಮಿ ನಿತ್ಯಾನಂದನ ಮತ್ತೊಂದು ವಂಚನೆ ಬಯಲಾಗಿದೆ. ವಿಶ್ವದಲ್ಲಿ ಅಸ್ತಿತ್ವದಲ್ಲೇ ಇಲ್ಲದ ಕೇವಲ ಕಾಲ್ಪನಿಕವಾಗಿರುವ ಕೈಲಾಸ ದೇಶವನ್ನು ಸ್ವಾಮಿ ನಿತ್ಯಾನಂದ ತನ್ನ ಭಕ್ತಗಣದ ಮೂಲಕ ಅಮೆರಿಕದ 30ಕ್ಕೂ ಅಧಿಕ ನಗರಗಳ ಜೊತೆ ಸಾಂಸ್ಕೃತಿಕ ಸಹಯೋಗ ಒಪ್ಪಂದ ಮಾಡಿಕೊಂಡಿರುವುದು ಈಗ ಬೆಳಕಿಗೆ ಬಂದಿದೆ.
‘ಸಿಸ್ಟರ್ ಸಿಟಿ’ ಎಂದು ಇದಕ್ಕೆ ಆತ ಹೆಸರು ಕೊಟ್ಟಿದ್ದು ನೇವರ್ಕ್, ರಿಚ್ಮಂಡ್, ವರ್ಜೀನಿಯಾ, ಒಹಾಯೋ ಸೇರಿ ಹಲವು ನಗರಗಳ ನಡುವೆ ಈ ಒಪ್ಪಂದ ಏರ್ಪಟ್ಟಿತ್ತು. ಇದೀಗ ಆತನ ಕೈಲಾಸ ದೇಶ ಅಸ್ತಿತ್ವದಲ್ಲಿ ಇಲ್ಲ ಎಂದು ಅರಿವಾಗುತ್ತಲೆ, ನೇವರ್ಕ್ ನಗರ ಒಪ್ಪಂದವನ್ನು ರದ್ದುಗೊಳಿಸಿದೆ. ಇತರೆ ನಗರಗಳು ಸಹ ಇದೇ ಹಾದಿಯನ್ನು ಅನುಸರಿಸಲು ಮುಂದಾಗಿವೆ.