ಈ ವರ್ಷ ಬೆಂಗಳೂರಿನಲ್ಲಿ ಚಿತ್ರ ಬಿಡುಗಡೆಯಾದ ಎರಡನೇ ದಿನಕ್ಕೆ 600ಕ್ಕೂ ಹೆಚ್ಚು ಪ್ರದರ್ಶನ ಕಾಣುತ್ತಿರುವ ಮೊದಲನೆಯ ಚಿತ್ರ. ಮೊದಲ ದಿನ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡ ಕಬ್ಜ ಚಿತ್ರ ಬೆಂಗಳೂರು ನಗರದಲ್ಲಿ ಎರಡನೇ ದಿನ ತನ್ನ ಪ್ರದರ್ಶನಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ. ಹೌದು, ಬಿಡುಗಡೆ ದಿನ ಪಡೆದುಕೊಂಡಿದ್ದ ಪ್ರದರ್ಶನಗಳ ಸಂಖ್ಯೆಗಿಂತ ಎರಡನೇ ದಿನ ಕಬ್ಜ ಚಿತ್ರ ಹೆಚ್ಚು ಪ್ರದರ್ಶನಗಳನ್ನು ಬೆಂಗಳೂರು ನಗರದಲ್ಲಿ ಪಡೆದುಕೊಂಡಿದೆ. ಮೊದಲ ದಿನ ಬೆಂಗಳೂರಿನಲ್ಲಿ 597 ಪ್ರದರ್ಶನಗಳನ್ನು ಪಡೆದುಕೊಂಡಿದ್ದ ಕಬ್ಜ ಚಿತ್ರ ಇಂದು ಎರಡನೇ ದಿನ 623 ಪ್ರದರ್ಶನಗಳನ್ನು ಪಡೆದುಕೊಂಡಿದೆ.
ಈ ರೀತಿ ಈ ವರ್ಷ ತೆರೆಕಂಡ ಯಾವ ಸಿನಿಮಾಗಳೂ ಸಹ ಬೆಂಗಳೂರಿನಲ್ಲಿ ಮೊದಲ ದಿನಕ್ಕಿಂತ ಎರಡನೇ ದಿನ ಹೆಚ್ಚಿನ ಪ್ರದರ್ಶನಗಳನ್ನು ಪಡೆದುಕೊಂಡಿರಲಿಲ್ಲ. ಮೊದಲ ದಿನ ದೊಡ್ಡ ಸಂಖ್ಯೆಯ ಪ್ರದರ್ಶನಗಳನ್ನು ಪಡೆದುಕೊಂಡಿದ್ದ ಚಿತ್ರಗಳು ಎರಡನೇ ದಿನ ಕಡಿಮೆ ಪ್ರದರ್ಶನಗಳನ್ನು ಪಡೆದುಕೊಂಡು ಶೋಗಳನ್ನು ಕಳೆದುಕೊಂಡಿದ್ದವು. ಈ ವರ್ಷ ತೆರೆಕಂಡ ಚಿತ್ರಗಳಲ್ಲಿ ಎರಡನೇ ದಿನ 600ಕ್ಕಿಂತ ಹೆಚ್ಚಿನ ಪ್ರದರ್ಶನಗಳನ್ನು ಬೆಂಗಳೂರಿನಲ್ಲಿ ಪಡೆದುಕೊಂಡ ಏಕೈಕ ಚಿತ್ರ ಎನಿಸಿಕೊಂಡಿದೆ ಕಬ್ಜ.
ಈ ವರ್ಷ ಬಿಡುಗಡೆಯಾದ ಚಿತ್ರಗಳು ಬೆಂಗಳೂರಿನಲ್ಲಿ ಮೊದಲ ದಿನ ಪಡೆದುಕೊಂಡ ಪ್ರದರ್ಶನಗಳ ಸಂಖ್ಯೆ ಈ ಕೆಳಕಂಡಂತಿದೆ..
ಪಠಾಣ್ – 821 ಪ್ರದರ್ಶನಗಳು
ವಾರಿಸು – 757 ಪ್ರದರ್ಶನಗಳು
ಕ್ರಾಂತಿ – 680 ಪ್ರದರ್ಶನಗಳು
ಕಬ್ಜ – 597 ಪ್ರದರ್ಶನಗಳು
ತುನಿವು – 568 ಪ್ರದರ್ಶನಗಳು
ಎರಡನೇ ದಿನ ಈ ಚಿತ್ರಗಳು ಪಡೆದುಕೊಂಡ ಶೋಗಳ ಸಂಖ್ಯೆ
ಪಠಾಣ್ – 563 ಪ್ರದರ್ಶನಗಳು
ವಾರಿಸು – 321 ಪ್ರದರ್ಶನಗಳು
ಕ್ರಾಂತಿ – 583 ಪ್ರದರ್ಶನಗಳು
ಕಬ್ಜ – 623 ಪ್ರದರ್ಶನಗಳು
ತುನಿವು – 300 ಪ್ರದರ್ಶನಗಳು