ಇತ್ತೀಚೆಗೆ ತೆಲುಗು ನಟ ನರೇಶ್ ಹಾಗೂ ಕನ್ನಡದ ನಟಿ ಪವಿತ್ರಾ ಲೋಕೇಶ್ ಮದುವೆಯಾಗಿದ್ದು, ದುಬೈನಲ್ಲಿ ಒಟ್ಟಿಗೆ ಓಡಾಡುತ್ತಿರುವ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ಸುಚೇಂದ್ರ ಪ್ರಸಾದ್ ಹೇಳಿದ್ದಾರೆ ಎನ್ನಲಾದ ಆಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸುಚೇಂದ್ರ ಪ್ರಸಾದ್ ಮಾಜಿ ಪತ್ನಿ ಪವಿತ್ರಾ ಲೋಕೇಶ್ ದುಡ್ಡಿಗಾಗಿ ಏನೆಲ್ಲ ಮಾಡುತ್ತಾಳೆ. ನರೇಶ ಹಿಂದೆ ಬಿದ್ದಿರುವ ಕಾರಣವೂ ಅದೆ. ಆಕೆಗೆ ದುಡ್ಡಿನ ದಾಹ ಎಂದು ಆಡಿಯೋದಲ್ಲಿ ಹೇಳಿದ್ದು, ಆಡಿಯೋ ಕೇಳಿದ ಅನೇಕರು ನಾನಾ ರೀತಿಯಲ್ಲಿ ಮಾತನಾಡುತ್ತಿದ್ದಾರೆ.
ಪವಿತ್ರಾ ಲೋಕೇಶ್ ಮತ್ತು ನರೇಶ್ ದುಬೈನಲ್ಲಿ ಕಾಣಿಸಿಕೊಂಡ ಮೂರು ದಿನಗಳ ಮುಂಚೆ ಇಬ್ಬರೂ ಮದುವೆಯಾಗಿದ್ದಾರೆ ಎನ್ನುವ ವಿಡಿಯೋವನ್ನು ಸ್ವತಃ ನರೇಶ್ ಪೋಸ್ಟ್ ಮಾಡಿಕೊಂಡಿದ್ದರು. ಈ ವಿಡಿಯೋ ರಿಲೀಸ್ ಆದ ಬೆನ್ನಲ್ಲೇ ದುಬೈ ಟ್ರೀಪ್ ಫೋಟೋಗಳು ಕೂಡ ವೈರಲ್ ಆಗಿದ್ದು, ಮದುವೆ ಮುಗಿಸಿಕೊಂಡು ಇಬ್ಬರೂ ಹನಿಮೂನ್ ಗೆ ಹೋಗಿದ್ದಾರೆ ಎಂದು ಹೇಳಲಾಗಿತ್ತು.
ಈ ಮದುವೆ, ಹನಿಮೂನ್ ಬಗ್ಗೆ ಮಾಧ್ಯಮಗಳಿಗೆ ಯಾವುದೇ ರೀತಿಯಲ್ಲಿ ಸ್ಪಷ್ಟನೆ ನೀಡಿಲ್ಲ ನರೇಶ್. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳುವ ಮೂಲಕ ಮಾಧ್ಯಮಗಳಿಂದ ನರೇಶ್ ಜಾರಿಕೊಂಡಿದ್ದಾರೆ. ಈ ಮಧ್ಯೆ ಸುಚೇಂದ್ರ ಪ್ರಸಾದ್ ಹೇಳಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ.
ಪವಿತ್ರಾ ಲೋಕೇಶ್ ಲವ್ ಟ್ರ್ಯಾಕ್ ಶುರು ಮಾಡಿದ್ದೇ 1500 ಕೋಟಿ ಹೊಡೆಯಲು- ಮೊದಲ ಪತಿ ಸುಚೇಂದ್ರ ಪ್ರಸಾದ್