ಆಂಬುಲೆನ್ಸ್ ಸಿಗದ ಕಾರಣ ಯುವಕನೊಬ್ಬ ತನ್ನ ಸಹೋದರಿಯ ಮೃತದೇಹವನ್ನ ಬೈಕ್ ನಲ್ಲಿ ಹತ್ತುಕಿಲೋ ಮೀಟರ್ ಸಾಗಿಸಿರುವ ಘಟನೆ ಉತ್ತರ ಪ್ರದೇಶ ಕೌಶಾಂಬಿಯಲ್ಲಿ ನಡೆದಿದೆ. ವಿದ್ಯಾರ್ಥಿನಿ ಶಾಲಾ ಮಧ್ಯಂತರ ಪರೀಕ್ಷೆಯಯಲ್ಲಿ ಫೇಲ್ ಆಗುವ ಭಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಷಯ ತಿಳಿದ ತಕ್ಷಣ ಸಂಬಂಧಿಕರು ಆಕೆಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರಾದೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ವಾಹನ ಸಿಗದ ಕಾರಣ ವಿದ್ಯಾರ್ಥಿಯ ಸಹೋದರ ಬೈಕ್‌ನಲ್ಲಿ ಶವವನ್ನು ಮನೆಗೆ ತಂದಿದ್ದಾನೆ. ಈ ಘಟನೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊಖ್ರಾಜ್ ಪೊಲೀಸ್ ಠಾಣಾ ವ್ಯಾಪ್ತಿಯ ಭರ್ವಾರಿ ಪುರಸಭೆಯ ಅಂಬೇಡ್ಕರ್ ನಗರದಲ್ಲಿ ಘಟನೆ ನಡೆದಿದೆ.
ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆದಿಲ್ಲ ಎಂದು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಳು. ಗುರುವಾರ ವಿದ್ಯಾರ್ಥಿನಿ ತನ್ನ ರೂಮ್ ಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವಿಷಯ ತಿಳಿದ ತಕ್ಷಣ ಸಂಬಂಧಿಕರು ಯುವತಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಇದಾದ ಬಳಿಕ ಮೃತಳ ಸಹೋದರ ಮೃತದೇಹವನ್ನ ತೆಗೆದುಕೊಂಡು ಹೋಗಲು ಆಸ್ಪತ್ರೆಯ ಆಡಳಿತ ಮಂಡಳಿಗೆ ವಾಹನ ನೀಡುವಂತೆ ಬೇಡಿಕೆ ಇಟ್ಟರೂ ಅರ್ಧ ಗಂಟೆ ಕಾದರೂ ವಾಹನ ಸಿಗದ ಕಾರಣ, ಕೊನೆಗೆ ಸಹೋದರ ಸಹೋದರಿಯ ಶವವನ್ನು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿದ್ದಾನೆ.