ಸಾಕು ನಾಯಿಯೊಂದಿಗೆ ರೈಲಿನಲ್ಲಿ ಪ್ರಯಾಣ ಮಾಡಬಹುದು ಎಂಬುದು ನಿಮಗೆ ತಿಳಿದಿತ್ತೇ ? ಎಸಿ ಪ್ರಥಮ ದರ್ಜೆ ಹಾಗೂ ಪ್ರಥಮ ದರ್ಜೆ ಕಂಪಾರ್ಟ್ಮೆಂಟ್ಗಳಲ್ಲಿ ಸಾಕು ನಾಯಿಗಳೊಂದಿಗೆ ಪ್ರಯಾಣಿಸಲು ಭಾರತೀಯ ರೈಲ್ವೇ ಅನುಮತಿ ನೀಡುತ್ತಿದೆ. ಇದಕ್ಕಾಗಿ ಇಡೀ ಕೂಪ್ ಒಂದನ್ನು ಪ್ರಯಾಣಿಕರು ಬುಕ್ ಮಾಡಬೇಕಾಗುತ್ತದೆ. ಇತ್ತೀಚೆಗೆ ಪ್ರಥಮ ದರ್ಜೆ ಕೂಪ್ ಒಂದರಲ್ಲಿ ಯುವತಿಯೊಬ್ಬರು ಶ್ವಾನದೊಂದಿಗೆ ಪ್ರಯಾಣ ಮಾಡುತ್ತಿರುವ ವಿಡಿಯೋವೊಂದನ್ನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಶೇರ್ ಮಾಡಿದ್ದಾರೆ.
ಬೇರೊಬ್ಬರು ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಮೊದಲಿಗೆ ಶೇರ್ ಮಾಡಲಾಗಿತ್ತು. ಈ ವಿಡಿಯೋಗೆ ಅದಾಗಲೇ 27 ದಶಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳು ಸಂದಾಯವಾಗಿವೆ. “24×7 ನಿಮ್ಮ ಸೇವೆಯಲ್ಲಿ ಭಾರತೀಯ ರೈಲ್ವೇ” ಎಂದು ಕ್ಯಾಪ್ಷನ್ ಕೊಟ್ಟಿರುವ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಈ ವಿಡಿಯೋ ಶೇರ್ ಮಾಡಿದ್ದಾರೆ.
Indian Railways at your service 24×7 https://t.co/YQTZ3phBZR
— Ashwini Vaishnaw (@AshwiniVaishnaw) March 15, 2023