ಖಾನಾಪೂರ : ತಾಲೂಕಿನ ನಂದಗಡ ಪೋಲಿಸರು ಮಿಂಚಿನ ಕಾರ್ಯಾಚರಣೆ ನಡೆಸಿ ಅಕ್ರಮ ವಾಗಿ ಶ್ರೀಗಂಧದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಖಾನಾಪೂರ ತಾಲೂಕಿನ ನಂದಗಡ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿನ ಸಂಗೋಳ್ಳಿ ರಾಯಣ್ಣನನ್ನು ಗಲ್ಲಿಗೆ ಏರಿಸಿದ ಸ್ಥಳದ ಪಕ್ಕದಲ್ಲಿಯೆ ಆತ ಶ್ರೀಗಂಧದ ಗಿಡವನ್ನು ಕಳ್ಳತನದಿಂದ ಕಡಿದು ಅದರ ತುಂಡುಗಳನ್ನು ಸರ್ಕಾರದಿಂದ ಯಾವುದೇ ಪರವಾನಿಗೆ ಇಲ್ಲದೆ, ನಿರ್ಬಯವಾಗಿ ತನ್ನ ಕಬ್ಜಾದಲ್ಲಿ ಇಟ್ಟುಕೊಂಡು ಕಾನೂನು ಬಾಹಿರವಾಗಿ ತನ್ನ ಸ್ವಂತ ಪಾಯ್ದೆಗೊಸ್ಕರ ಅಕ್ರಮವಾಗಿ ಸಾಗಿಸುವ ಖಚಿತ ಮಾಹಿತಿ ಮೇರೆಗೆ ನಂದಗಡ ಪೋಲಿಸ್ ಠಾಣೆಯ ಎ.ಎಸ್.ಐ .ಎಚ್.ಶ್ರೀನಿವಾಸ ಅವರ ಮಾರ್ಗದರ್ಶನದಲ್ಲಿ ಎಸ್.ಬಿ.ಬೇಳವಡಿ,ಎಮ್.ಎಮ್.ಮುಲ್ಲಾ ,ಯು.ಬಿ.ಶಿಂತ್ರಿ , ಬಸವರಾಜ ಲಮಾಣಿ ಅವರು ದಾಳಿ ನಡೆಸಿ ಆರೋಪಿಯಾದ ಬಿದರಬಾವಿ ಗ್ರಾಮದ ಆನಂದ ಮಾರುತಿ ರಾಮಣ್ಣನವರ ಈತನನ್ನು ಬಂಧಿಸಿ ಇತನಿಂದ ಶ್ರೀಗಂಧದ ಕಟ್ಟಿಗೆಯ ತುಂಡುಗಳನ್ನು ಜಪ್ತಿ ಮಾಡಿಕೊಂಡು ಅಪರಾಧ ಸಂಖ್ಯೆ 35/2023 ಕಲಂ 379 ಐಪಿಸಿ ಮತ್ತು ಕಲಂ 86,87 ಕರ್ನಾಟಕ ಅರಣ್ಯ ಅಧಿನಿಯಮ 1963 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವರದಿ : ಚರಂತಯ್ಯ ಹಿರೇಮಠ.