ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೀಪದ ಗ್ರಾಮ ಒಂದರಲ್ಲಿ ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆ ಗರ್ಭಿಣಿಯಾಗಲು ಕಾರಣನಾಗಿದ್ದ ಯುವಕ ನಂತರ ಆಕೆಯನ್ನು ಮದುವೆಯಾಗಿದ್ದಾನೆ.
4 ವರ್ಷದ ಹಿಂದೆ ಬಾಲಕಿಯ ತಾಯಿ ಮೃತಪಟ್ಟಿದ್ದು, ಪ್ರೌಢಶಾಲೆ ಓದುತ್ತಿದ್ದ ಬಾಲಕಿ ಓದುವುದನ್ನು ನಿಲ್ಲಿಸಿ ತಂದೆ ಮತ್ತು ಅಣ್ಣನೊಂದಿಗೆ ವಾಸವಾಗಿದ್ದಾಳೆ. ಅದೇ ಗ್ರಾಮದ ಯುವಕ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದಾನೆ. ಬಾಲಕಿ ಗರ್ಭಿಣಿಯಾಗಿರುವುದನ್ನು ತಿಳಿಸಿದ ನಂತರ ಮಾರ್ಚ್ 14ರಂದು ಕರೆದುಕೊಂಡು ಹೋಗಿ ಸ್ನೇಹಿತನ ಮನೆಯಲ್ಲಿ ಉಳಿಸಿಕೊಂಡಿದ್ದಾನೆ. ಮಾರನೇ ದಿನ ದೇವಾಲಯ ಒಂದರಲ್ಲಿ ಮದುವೆಯಾಗಿದ್ದಾನೆ. ಯುವಕನ ವಿರುದ್ಧ ಬಾಲ್ಯ ವಿವಾಹ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.