ವಾಹನವನ್ನು ಓವರ್ ಟೇಕ್ ಮಾಡಿದ ಕಾರಣಕ್ಕೆ ಮಹಿಳೆಯೊಬ್ಬರ ಮೇಲೆ ವಾಹನ ಚಾಲಕ ನಡುರಸ್ತೆಯಲ್ಲೇ ಹಲ್ಲೆ ಮಾಡಿದ್ದಾನೆ. ಈ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ವಾಹನ ಚಾಲಕನ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮಹಿಳೆಯನ್ನು ಚಾಲಕ ಥಳಿಸಿರೋ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿರುವುದರಿಂದ ಅನೇಕರು ಚಾಲಕನನ್ನು ದೂಷಿಸುತ್ತಿದ್ದು ಆತನ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ. ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಶಿವಸೇನಾ ನಾಯಕಿ ಶಿಲ್ಪಾ ಬೋಡ್ಖೆ, ” ವಾಹನವನ್ನು ಹಿಂದಿಕ್ಕಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬರು ಮಹಿಳೆಯೊಬ್ಬರನ್ನು ಥಳಿಸಿದ ನಾಚಿಕೆಗೇಡಿನ ಘಟನೆಯೊಂದು ಭರ್ ಚೌಕ್ನಲ್ಲಿ ನಡೆದಿದೆ. ಗೃಹ ಸಚಿವ ದೇವೇಂದ್ರ ಫಡ್ನವೀಸ್ ಜಿ ಇದು ನಮ್ಮ ನಾಗ್ಪುರದಲ್ಲಿ ನಡೆದಿದೆ. ಈಗ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಎಲ್ಲೆಡೆ ಆಚರಿಸಲಾಯಿತು. ಇಲ್ಲಿ ಮಹಿಳೆಯರಿಗೆ ಗೌರವವನ್ನು ನೋಡಿ, ಅದು ಎಷ್ಟು ಸುರಕ್ಷಿತವಾಗಿದೆ ಎಂದು ನೋಡಿ” ಎಂದು ಟ್ವೀಟ್ ಮಾಡಿದ್ದಾರೆ.
ವರದಿಯೊಂದರ ಪ್ರಕಾರ, ಈ ಘಟನೆ ಜಾರಿಪಟ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಸ್ಕೂಟಿಯಲ್ಲಿದ್ದ ಮಹಿಳೆ ಮತ್ತು ಟ್ಯಾಕ್ಸಿ ಚಾಲಕನ ನಡುವೆ ವಾಗ್ವಾದ ನಡೆದಿದೆ. ಮಧ್ಯಾಹ್ನ 1 ಗಂಟೆಗೆ ಇಂದೋರಾ ಚೌಕ್ನಿಂದ ಭೀಮ್ ಚೌಕ್ಗೆ ಹೋಗುವ ರಸ್ತೆಯಲ್ಲಿ ಮಹಿಳೆ ಶಿವಶಂಕರ್ ಶ್ರೀವಾಸ್ತವ ಎಂದು ಗುರುತಿಸಲಾದ ಟ್ಯಾಕ್ಸಿ ಚಾಲಕನನ್ನು ಹಿಂದಿಕ್ಕಿದ್ದಾಳೆ ಎಂದು ವರದಿಯಾಗಿದೆ.
ಇದರಿಂದ ಕೆರಳಿದ ಟ್ಯಾಕ್ಸಿ ಚಾಲಕನು ಮಹಿಳೆಯನ್ನು ನಿಂದಿಸಿದನು. ಇದನ್ನು ಪ್ರಶ್ನಿಸಿದ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿದನು. ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಾಲಕನನ್ನು ಬಂಧಿಸಿದ್ದಾರೆ.
नागपूर : केवळ महिलेने ओव्हरटेक केले म्हणून राग आलेल्या एका व्यक्तीने महिलेला मारहाण केल्याची लाजीरवाणी घटना भर चौकात घडली आहे….
गृहमंत्री @Dev_Fadnavis जी हे आपलं नागपूर आहे आताच महिला दिनाचा कार्यक्रम सर्वत्र साजरा झाला आहे आणि इथे महिलेला मान सम्मान बघा किती सुरक्षित आहे ते… https://t.co/9vBXxhtPpa pic.twitter.com/UJsH1wbcFs
— Shilpa Bodkhe – प्रा.शिल्पा बोडखे (@BodkheShilpa) March 18, 2023