ಎಲ್ಲಿ ನಿಂತರೂ ಗೆದ್ದೇನು ಎಂಬ ಭ್ರಮೆಯಲ್ಲಿ ಅಹಂಕಾರ ನೆತ್ತಿಗೇರಿಸಿಕೊಂಡು ಮಾತಾಡುತ್ತಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಒಂದೇ ಒಂದು ಕ್ಷೇತ್ರ ಇಲ್ಲದಂತಾಗಿದೆ ಎಂದು ಆಡಳಿತ ಪಕ್ಷ ಬಿಜೆಪಿ ವ್ಯಂಗ್ಯವಾಡಿದೆ. ರಾಜ್ಯದ ಜನ ಇವರನ್ನು ಮತ್ತು ಕಾಂಗ್ರೆಸ್ ಪಕ್ಷವನ್ನು ಹೀನಾಯವಾಗಿ ತಿರಸ್ಕರಿಸಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ.
ಇವರು ಎಲ್ಲಿ ನಿಂತರೂ ಸೋಲುವುದು ಖಚಿತ! ಎಂದು ಬಿಜೆಪಿ ಟಾಂಗ್ ನೀಡಿದೆ. ಕೋಲಾರದಿಂದ ಸ್ಪರ್ಧೆಗೆ ಮುಂದಾಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೋಲಾರದಿಂದ ಹಿಂದೆ ಸರಿಯುವಂತೆ ಸಲಹೆ ನೀಡಿದ್ದರು. ಅಲ್ಲದೇ ವರುಣಾದಿಂದ ಸ್ಪರ್ಧೆ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತೆ ಕ್ಷೇತ್ರ ಗೊಂದಲದಲ್ಲಿದ್ದು, ಆಡಳಿತ ಪಕ್ಷ ಬಿಜೆಪಿ ಟೀಕೆಗೆ ಕಾರಣವಾಗಿದೆ.
ಎಲ್ಲಿ ನಿಂತರೂ ಗೆದ್ದೇನು ಎಂಬ ಭ್ರಮೆಯಲ್ಲಿ ಅಹಂಕಾರ ನೆತ್ತಿಗೇರಿಸಿಕೊಂಡು ಮಾತಾಡುತ್ತಿದ್ದ @siddaramaiah ಅವರಿಗೆ ಒಂದೇ ಒಂದು ಕ್ಷೇತ್ರ ಇಲ್ಲದಂತಾಗಿದೆ.
ರಾಜ್ಯದ ಜನ ಇವರನ್ನು ಮತ್ತು @INCKarnataka ಪಕ್ಷವನ್ನು ಹೀನಾಯವಾಗಿ ತಿರಸ್ಕರಿಸಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ.
ಇವರು ಎಲ್ಲಿ ನಿಂತರೂ ಸೋಲುವುದು ಖಚಿತ! pic.twitter.com/aaVoMfLcMp
— BJP Karnataka (@BJP4Karnataka) March 19, 2023