ಕಲಬುರಗಿ: ಹಲವು ವರ್ಷಗಳಿಂದ ಅನೇಕ ಕಾರಣ ಗಳಿಂದ ಖಾಲಿ ಇದ್ದ ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಇಂದು ಟೌನ್ ಹಾಲ್ (ಇಂದಿರಾ ಸ್ಮಾರಕ ಭವನದಲ್ಲಿ) ಚುನಾವಣೆ ನಡೆದಿದ್ದು ತೀವ್ರ ಪೈಪೋಟಿಯಿಂದ ಕೂಡಿದ ಚುನಾವಣೆಯಲ್ಲಿ ಮೊದಲ ಬಾರಿಗೆ ಮಹಾನಗರ ಪಾಲಿಕೆ ಕಲಬುರಗಿ ಯಲ್ಲಿ ಕಮಲ ಅರಳಿದ್ದು ಮೇಯರ್ ಆಗಿ ವಿಶಾಲ ದರ್ಗಿ ಹಾಗೂ ಉಪಮೇಯರ್ ಆಗಿ ಶಿವಾನಂದ ಪಿಸ್ತಿ ಅವರು ಆಯ್ಕೆಯಾಗಿದ್ದಾರೆ.
ಕಿಂಗ್ ಮೇಕರ್ ಆಗಿ ಗುರುತಿಸಿಕೊಂಡ ಜೆಡಿಎಸ್ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದರು. ವಾರ್ಡ್ ನಂಬರ್ 42ರ ಸದಸ್ಯ ಅಲಿಂ ಪಟೇಲ್ ಹಾಗೂ ಕಾಂಗ್ರೆಸ್ ನ ರಾಜ್ಯ ಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರ ಗೈರಾಗಿದ್ದರು ಹೀಗಾಗಿ ಬಿಜೆಪಿ ಸರಳವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಿತು.
ವರದಿ ನಾಗರಾಜ್ ಗೊಬ್ಬುರ