ಕುಂದಗೋಳ; ತಾಲೂಕಿನ ವಿವಿಧ ಗ್ರಾಮಗಳಿಗೆ ಬೇಸಗೆ ಬೇಗುದಿಗೆ ಕುಡಿಯಲು ನೀರು ಇಲ್ಲದೆ ಗ್ರಾಮಸ್ಥರು ನೀರಿನ ಬವಣೆಗೆ ರೋಸಿ ಹೊಗಿದ್ದಾರೆ.
ಹೌದು..! ಕಳೆದ ಬಾರಿ ಹಿಂದೆ ಕುಡಿಯುವ ನೀರು ಸ್ಥಗತಿಗೊಂಡಿತ್ತು, ಇವಾಗ ಮತ್ತೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೋಟರ್ ಕೆಟ್ಟ ಪರಿಣಾಮ ನೀರು ಸರಬರಾಜು ಸ್ಥಗತಿಗೊಂಡಿದೆ. ಇತ್ತ ಶುದ್ದ ನೀರಿಗಾಗಿ ಹಳ್ಳಿಗರು ಪಟ್ಟಣದ ಅತ್ತ ಮುಖ ಮಾಡಿದ್ದಾರೆ, ಕೆಲವೊಂದು ಗ್ರಾಮಸ್ಥರು ಗ್ರಾಮದ ಕೆರೆಗಳಿಗೆ, ರೈತರ ಜಮೀನುಗಳ ಕೃಷಿಹೊಂಡಕ್ಕೆ ತೆರಳಿ ಕೆರೆ ನೀರು ತರುತ್ತಿದ್ದಾರೆ. ಹೀಗಾಗಿ ನೀರಿನ ಸಮಸ್ಯೆಯ ಅಧಿಕಾರಿಗಳ ಗಮನಕ್ಕೆ ಬಂದಿಲವ್ವಾ? ಅನ್ನುವುದು ಜನಸಾಮಾನ್ಯರ ಪ್ರಶ್ನೆ.
ಕುಡಿಯುವ ನೀರಿನ ಕೊರತೆ ವಿವಿಧ ಗ್ರಾಮಗಳಿಗೆ ನೀರಿನ ಸಮಸ್ಯೆ ತೆಲೆದೂರಿದೆ. ಗ್ರಾಮ ಗಳಾದ ಯರೇನಾರಾಯಣಪೂರ, ಯರಗುಪ್ಪಿ, ಚಿಕ್ಕನರ್ತಿ, ಹೀರೆನರ್ತಿ, ಬೆನಕನ ಹಳ್ಳಿ, ಕಡಪಟ್ಟ, ಅಲ್ಲಾಪೂರ, ರೊಟ್ಟಿಗವಾಡ, ಕೊಂಕಣ್ಣಕುರಹಟ್ಟಿ, ಚಾಕಲಬ್ಬಿ, ಸೇರಿದಂತೆ ಇತರೆ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದ್ದು ಕಾಣುತ್ತಿದ್ದು, ಅಧಿಕಾರಿಗಳೂ ಏನು ಮಾಡುತ್ತಿದ್ದಾರೆ? ಅಂತ ಜನರು ಪ್ರಶ್ನೆ ಮಾಡ್ತಾ ಇದ್ದಾರೆ? ಇದ್ಯಾವುದೂಕ್ಕೂ ಉತ್ತರ ನೀಡದ ಅಧಿಕಾರಿಗಳು? ಜನ ನೀರಿಗಾಗಿ ತತ್ತಿರಿಸಿವಂತೆ ಮಾಡಿದೆ.
ಸರಕಾರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಾಕಷ್ಟು ಹಣ ಬಿಡುಗಡೆ ಮಾಡುತ್ತಾ ಬಂದಿದೆ. ಅದರಂತೆ ಕಳೆದ ತಿಂಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ, ಗ್ರಾಮೀಣ ಕುಡಿಯುವ ನೀರಿನ ನೈರ್ಮಲ್ಯ ಇಲಾಖೆ ಕುಂದಗೋಳ ವಿಭಾಗದ ದಲ್ಲಿ ಈಗಾಗಲೇ ಯರೇನಾರಾಯಣಪೂರ ಇತರೆ 13 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ ದುರಸ್ತಿಗೆ 4 ಲಕ್ಷ ರೂಪಾಯಿ ಅಂದಾಜು ವೆಚ್ಚ ಎಸ್ ಡಿ ಪಿ ಯೋಜನೆಡಿಯಲ್ಲಿ ದಿನಾಂಕ; 10/03/2023 ರಂದು ಭರಸಿಲಾಗಿದೆ. ಪುನಃ ಪುನಃ ಸಮಸ್ಯೆ ತೆಲೆದೊರಿದರು, ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ದೊರುತ್ತಿದ್ದಾರೆ. ಸರಕಾರ ಕುಡಿಯುವ ನೀರಿಗೆ ಕೊರತೆ ಉಂಟಾಗಬಾರದೆಂದು ಶಾಸನಬದ್ದ ಅನುದಾನದಡಿ ಯಲ್ಲಿ ಹಣ ಇರಿಸಲಾಗುತ್ತದೆ, ಆದರೆ ಸಮರ್ಪಕ ಬಳಿಕೆ ಏಕೆ ಆಗುತ್ತಿಲ್ಲ? ಯಾವಾಗ ನೋಡಿದರೂ ರಿಪೇರಿ ಅಂತ ಅಧಿಕಾರಿಗಳು ಹೇಳ್ತಾ ಮುಂದುವರೆಯುತ್ತ ಇದ್ದಾರೆ.
ಈ ಬಗ್ಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನ ಸಂಪರ್ಕಸಿದಾಗ ಕುಂದಗೋಳ ಜಲ ಮಂಡಳಿಯಿಂದ ಟ್ಯಾಂಕರ್ ಮೂಲಕ ಶುದ್ದ ಘಟಕಕ್ಕೆ ನೀರು ಶೇಖರಿಸಿ, ತದನಂತರ ಶುದ್ದ ನೀರು ಪೂರೈಸುತ್ತವೆ. ಬಹುಗ್ರಾಮ ನೀರಿನ ಯೋಜನೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
-ಆರ್ ಟಿ ರತ್ನಾಕರ
ಯರಗುಪ್ಪಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಈಗಾಗಲೇ ದುರಸ್ತಿಗೊಳಿಸಿಲಾಗಿದೆ. ಇನ್ನೇನು ಎರಡು ದಿನಗಳಲ್ಲಿ ನೀರು ಸರಬರಾಜು ಮಾಡುತ್ತೇವೆ.
– ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್
ಆಕಾಶ ವಂದೇ ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಕುಂದಗೋಳ
ಒಟ್ಟಿನಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ದು ಗ್ರಾಮಸ್ಥರ ಪರದಾಟ ಹೇಳತೀರದೂ ಕೂಡಲೇ ಗ್ರಾಮೀಣ ಕುಡಿಯುವ ನೀರಿನ ನೈರ್ಮಲ್ಯ ಇಲಾಖೆ ಜನರ ದಾಹ ನೀಗಸುತ್ತಾರ ಇಲ್ಲ ಕಾದು ನೋಡಬೇಕು
ವರದಿ; ಶಾನು ಯಲಿಗಾರ