ಕುಂದಗೋಳ;ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಮತದಾನಕ್ಕೆ ಒಂದು ದಿನ ಬಾಕಿ ಇದ್ದು, ಈ ಹಿನ್ನೆಲೆಯಲ್ಲಿ ಮತದಾನಕ್ಕೆ ಭಾರಿ ಭದ್ರತೆ ಕೈಗೊಳ್ಳಲಾಗಿದೆ. ಮತದಾನ ಪ್ರಕ್ರಿಯೆಗೆ ಕುಂದಗೋಳ ಮತಕ್ಷೇತ್ರದಲ್ಲಿ 514 ಪೋಲಿಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಚುನಾವಣೆ ಹಿನ್ನೆಲೆಯಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ. ಚುನಾವಣೆ ಭದ್ರತೆಗೆ ಬೇಕಾದ ಎಲ್ಲ ರೀತಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಭದ್ರತಾ ಕಾರ್ಯಯದಲ್ಲಿ 2 ಡಿ ಎಸ್ ಪಿ, 3 ಸರ್ಕಲ್ ಪೋಲಿಸ್ ಇನ್ಸ್ ಪೆಕ್ಟರ್, 7ಪಿ ಎಸ್ ಐ, 4 ಎ ಎಸ್ ಐ, 248 ಸಿವಿಲ್ ಪೋಲಿಸ್ ಸಿಬ್ಬಂದಿ, ಸೇರಿದಂತೆ 250 ಕೇಂದ್ರ ಪೋಲಿಸ್ ಸಿಬ್ಬಂದಿಗಳ ಕೊಡ ನಿಯೋಜಿಸಲಾಗಿದೆ.
ವಿಧಾನಸಭೆ ಚುನಾವಣೆ ಕೆಲವು ಘಂಟೆಗಳು ಬಾಕಿ ಇದ್ದು. ಭದ್ರತೆ ಹಿತದೃಷ್ಟಿಯಿಂದ ಕುಂದಗೋಳ ಮತಕ್ಷೇತ್ರದೆಲ್ಲೆಡ ಅಹಿತಕರ ಘಟನೆ ನಡೆಯಬಾರದು ಎಂದು ಪೋಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಎಂದು ಧಾರವಾಡ ಜಿಲ್ಲಾ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಪ್ರತಿಕ್ರಿಯೆ ನೀಡಿದರು.