ಗ್ರಾಮೀಣ ಭಾಗದ ಜನರು. ವಿದ್ಯಾರ್ಥಿಗಳು ಶಿಕ್ಷಣ ಪಡಿಯಬೇಕೆಂದರೆ ಸಾಮಾನ್ಯ ವಾಗಿ ನಗರಕ್ಕೆ. ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಹಾಗೆ ಜನರು ತಮ್ಮ ಜೀವನ ಕಟ್ಟಿಕೊಳ್ಳಲು ಪಟ್ಟಣಕ್ಕೆ ಹೋಗುವುದು ತುಂಬಾ ಅವಶ್ಯಕ ಹಾಗಾಗಿ ಬೆಳಗ್ಗೆ ಪ್ರಯಾಣ ಬೆಳೆಸಬೇಕು ಅಂತ ಬಸ್ ಸ್ಟಾಪ್ ಅಲ್ಲಿ ಬಂದು ನಿಂತು ಬಸ್ ಗಾಗಿ ಕಾಯ್ತಿರಬೇಕಾದರೆ ಕೆಲವು ಬಸ್ಸುಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ ಹಾಗೆ ಒಂದೊಂದು ಬಾರಿ ಬಸ್ ನಿಲ್ಲಿಸುವುದಿಲ್ಲ.
ಹೌದು ಇದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮುಖ್ಯ ಹೆದ್ದಾರಿಗೆ ಬರುವ ಅಫಜಲಪುರ ತಾಲೂಕಿನ ಅತಿ ದೊಡ್ಡ ಗ್ರಾಮಗಳ ಪಟ್ಟಿಯಲ್ಲಿರುವ ಗೊಬ್ಬುರ ಬಿ ಗ್ರಾಮದಲ್ಲಿ ದಿನನಿತ್ಯ ನಡೀತಿರೋ ಘಟನೆ, ಪ್ರತಿನಿತ್ಯ ಗೊಬ್ಬುರ ಬಿ ಗ್ರಾಮದಿಂದ ನೂರಾರು ಜನರು ಹಾಗೂ ವಿದ್ಯಾರ್ಥಿಗಳು ಕಲಬುರಗಿಯ ಕಡೆ ಪ್ರಯಾಣ ಬೆಳೆಸುತ್ತಾರೆ ಆದರೆ ಗೊಬ್ಬುರದಿಂದ ಕಲಬುರಗಿ ಕಡೆ ಬರೋದಕ್ಕೆ ಒಂದೇ ಮಾರ್ಗ ಇರೋದ್ರಿಂದ ದಿನನಿತ್ಯ ಬೆಳಿಗ್ಗೆ ಅಫಜಲಪುರದಿಂದ ಬರುವ ಬಸ್ಸುಗಳು ಅತನೂರ, ಚೌಡಾಪುರದಲ್ಲಿಯೇ ತುಂಬಿಕೊಂಡು ಬರುತ್ತಿರುವುದರಿಂದ ಗೊಬ್ಬುರ ಬಿ ಗ್ರಾಮದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಈ ತೊಂದರೆಗೆ ಮುಖ್ಯ ಕಾರಣವೆಂದರೆ ಅಫಜಲಪುರ ಬಸ್ ಘಟಕದ ಬೇಜವಾಬ್ದಾರಿತನ ಬಸ್ಸುಗಳ ಸಮಯ ಕಾಪಾಡದೇ ಇರುವುದು ಹಾಗೂ ಕೆಲವು ಬಸ್ಸುಗಳನ್ನು ನಾನ್ ಸ್ಟಾಪ್ ಹೆಸರಿನಲ್ಲಿ ಓಡಿಸುತ್ತಿರುವುದು ಅದರಲ್ಲಿ ಕೂಡ ವಿದ್ಯಾರ್ಥಿಗಳ ಪಾಸುಗಳನ್ನು ನಡೆಸಿಕೊಳ್ಳುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಗುರಿಯಾಗಿದೆ. ಕೆಲವು ಬಸ್ಸುಗಳು ಸರಿಯಾದ ಸಮಯಕ್ಕೆ ಬಾರದೆ ಇದ್ದಾಗ ಮುಂದೆ ಬರುವ ಬಸ್ ವಿದ್ಯಾರ್ಥಿಗಳು ಮತ್ತು ಜನರಿಂದ ತುಂಬಿಕೊಂಡು ಗ್ರಾಮದ ಪ್ರಯಾಣಿಕರಿಗೆ, ಮಹಿಳೆಯರಿಗೆ & ರೋಗಿಗಳಿಗೆ ಬಸ್ಸುಗಳಲ್ಲಿ ಜಾಗವಿರುವುದಿಲ್ಲ. ಆದ್ದರಿಂದ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗೊಬ್ಬುರ ಬಿ ಮಾರ್ಗವಾಗಿ ಬರುವ ಬಸ್ಸುಗಳನ್ನು ಬೆಳಗಿನ ಸಮಯ ಹೆಚ್ಚುವರಿಯಾಗಿ ಹಾಗೂ ಸರಿಯಾದ ಸಮಯ ಕಾಪಾಡಿಕೊಳ್ಳಬೇಕು ನೀಡಬೇಕೆಂದು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.