ಕುಂದಗೋಳ; ತಾಲೂಕಿನ ಹಿರೇನರ್ತಿ ಗ್ರಾಮದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮೈದಾನದಲ್ಲಿ ಮಳೆ ನೀರು ಸಂಗ್ರಹಗೊಂಡಿದ್ದು, ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ.
ಶಾಲೆಯಲ್ಲಿ ಇತ್ತೀಚೆಗೆ ಮಳೆ ಸುರಿದ ಪರಿಣಾಮ ನೀರು ಸಂಗ್ರಹಗೊಂಡು ಮಕ್ಕಳ ಪ್ರಾರ್ಥನೆ, ಆಟೋಟಕ್ಕೆ, ತೊಂದರೆಯಾಗುತ್ತಿದ್ದು, ಈ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ, ಸದ್ಯಸರಿಗೆ ಮೌಖಿಕವಾಗಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ.
ಶಾಲೆ ಆವರಣದಲ್ಲಿ ಮಳೆ ನೀರು ಸಂಗ್ರಹವಾಗಿ ಕಲುಷಿತಗೊಂಡರು ಸೂಕ್ತವಾದ ವ್ಯವಸ್ಥೆ ಕಲ್ಪಿಸದೆ ಕಿಂಚಿತ್ತೂ ಕಾಳಜಿ ತೊರದ ಅಧಿಕಾರಿಗಳು, ಬೇಜವಾಬ್ದಾರಿ ತೊರುತ್ತಿದ್ದಾರೆ.
ಒಂದು ವೇಳೆ ಸಂಗ್ರಹಗೊಂಡಿರುವ ಕಲುಷಿತ ನೀರಿನಿಂದ ಸೊಳ್ಳೆಗಳು ಉತ್ಪಾದನೆಗೊಂಡು, ಶಾಲೆಯ ಮಕ್ಕಳಿಗೆ ಸೊಳ್ಳೆ ಕಚ್ಚಿ ಡೆಂಗ್ಯೂ, ಇತರೆ ಕಾಯಿಲೆಗಳಿಗೆ ತುತ್ತಾದಾರೆ ಯಾರೂ ಹೊಣೆ.?
ಈ ಕೂಡಲೇ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶಾಲೆಯ ಮೈದಾನದಲ್ಲಿ ಸಂಗ್ರಹಗೊಂಡಿರುವ ನೀರನ್ನು ಆಚೆ ಆಕಲು ನಿಮ್ಮ ಸಿಬ್ಬಂದಿಗಳಿಗೆ ನಿರ್ದೇಶನ ನೀಡಿ ಮಕ್ಕಳಿಗೆ ಮೈದಾನದಲ್ಲಿ ಓಡಾಡಲು, ಆಟವಾಡಲು ವ್ಯವಸ್ಥೆ ಕಲ್ಪಿಸಬೇಕೆಂದು ನಮ್ಮ ಕಳಕಳಿ.
ವರದಿ; ಶಾನು ಯಲಿಗಾರ