ಧಾರವಾಡ ಜಿಲ್ಲೆಯಲ್ಲಿ ಲಾರಿ ಚಾಲಕನ ಹಣವನ್ನು ಪೋಲಿಸ್ ಅಧಿಕಾರಿ ಜೇಬಿಗೆ ಹಾಕಿಕೊಂಡ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಧಾರವಾಡ ಜಿಲ್ಲೆ ಕುಂದಗೋಳ ಪೋಲಿಸ್ ಠಾಣೆಯ ಮುಂಭಾಗದಲ್ಲಿ ವಾಹನ ತಪಾಸಣೆ ಮಾಡಿ ನಿಯಮ ಉಲ್ಲಂಘಿಸುವವರಿಗೇ ದಂಡ ವಿಧಿಸಲು ಕಾರ್ಯಾಚರಣೆ ನಡೆಸುವ ವೇಳೆ ಕರ್ತವ್ಯ ನಿರತ ಎ ಎಸ್ ಐ ಭೂದೇಶ್ ಮಡಿವಾಳರ ಮರಳು ಸಾಗಾಟದ ಲಾರಿ ಒಂದು ಬಂದಿದೆ ಆಗ ಕುಂದಗೋಳ ಪೋಲಿಸ್ ಠಾಣೆಯ ಪೊಲೀಸರು ಈ ಲಾರಿಯನ್ನು ತಡೆದು ತಪಾಸಣೆ ಮಾಡಿ ಚಾಲಕನಿಗೆ ದಂಡ ಹಾಕುವಾಗ ಲಾರಿ ಚಾಲಕ ಸರ್ ದಂಡ ಏನೂ ಬೇಡ ನನ್ನ ಬಳಿ ಇರುವ ಹಣವನ್ನು ಕೊಟ್ಟುಬಿಡುತ್ತೇನೆ ತಗೊಂಡು ಬಿಟ್ಟುಬಿಡಿ ಎಂದಾಗ ಎ ಎಸ್ ಐ ಮಡಿವಾಳರ ಲಾರಿ ಚಾಲಕನ ಬಳಿ ಇದ್ದ ಹಣವನ್ನು ಪಡೆದುಕೊಂಡು ಜೇಬಿಗೆ ಹಾಕಿಕೊಂಡಿದ್ದಾರೆ ಲಾರಿ ಹಾಗೂ ಚಾಲಕನನ್ನು ಸುಮ್ಮನೇ ಕಳುಹಿಸಿದ್ದಾರೆ.
ಪ್ರತಿದಿನ ಗದಗ ಜಿಲ್ಲೆ ಲಕ್ಷ್ಮೇಶ್ವರ ಕಡೆಯಿಂದ ಮರಳು ತುಂಬಿಕೊಂಡು ಹುಬ್ಬಳ್ಳಿ ಕಡೆಗೆ ನೂರಾರು ಲಾರಿಗಳು ಓಡಾಡುತ್ತವೆ ಈ ಎಲ್ಲಾ ಮರಳು ತುಂಬಿದ ಲಾರಿಗಳು ಧಾರವಾಡ ಜಿಲ್ಲೆಯ ಕುಂದಗೋಳ ಪೋಲಿಸ್ ಠಾಣೆಯ ಮುಂಭಾಗದಲ್ಲಿ ಓಡಾಡುತ್ತವೆ ಅದಕ್ಕೆ ಹೀಗೆ ಆಗುತ್ತಿರುವುದು ಸಾಮನ್ಯವಾಗಿಬಿಟ್ಟಿದೆ ಎಂಬುದು ಈ ಪ್ರಕರಣಕ್ಕೆ ಸಾಕ್ಷಿ.
ಆದರೂ ಸರಕಾರಿ ಸೇವೆಯಲ್ಲಿ ಪೋಲಿಸ್ ಅಧಿಕಾರಿ ಆಗೀ ಸರ್ಕಾರದಿಂದ ಸಂಬಳ ಪಡೆದೂ ಈ ರೀತಿಯಲ್ಲಿ ಲಂಚದ ರೂಪದಲ್ಲಿ ಚಾಲಕರ ಕಡೆಯಿಂದ ಹಣ ಪಡೆದ ಕುಂದಗೋಳ ಪೋಲಿಸ್ ಠಾಣೆಯ ಎ ಎಸ್ ಐ ಭೂದೆಶ್ ಮಡಿವಾಳರ ಮೇಲೆ ಧಾರವಾಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಲೋಕೇಶ್ ಜಗಲಾಸುರ್ ಯಾವ ಕ್ರಮವನ್ನು ಜರುಗಿಸುತ್ತಾರೋ ಗೊತ್ತಿಲ್ಲ. ಜಿಲ್ಲೆಯಲ್ಲಿರುವ ಇಂತಹ ಲಂಚಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಾರ ಕಾದು ನೋಡಬೇಕಾಗಿದೆ.
ವರದಿ : ಶಿವು ಹುಬ್ಬಳ್ಳಿ