ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಎಂಬ ಗ್ರಾಮದಲ್ಲಿ ಇ ಸ್ವತ್ತು ಮಾಡಿ ಲಂಚದ ದುರಾಸೆಯಿಂದ ಲಂಚ ಕೇಳಿದ ಪಿ ಡಿ ಓ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕು ಬಿದ್ದಿದ್ದಾರೆ ಅದರಗುಂಚಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂ ಡಿ ಕರಡಿಗುಡ್ಡ ಎಂಬ ವ್ಯಕ್ತಿಯೇ ಲೋಕಾಯುಕ್ತರ ಕೈಗೆ ಸಿಕ್ಕುಬಿದ್ದಿದ್ದಾರೆ ಎಂ ಡಿ ಕರಡಿಗುಡ್ಡ ಅವರು ಅದರಗುಂಚಿ ಗ್ರಾಮದ ನಿಂಗಪ್ಪ ಪಾಟೀಲ್ ಅವರ ಕಡೆಯಿಂದ ಎಂಟು ಸಾವಿರ ರೂ ಹಣವನ್ನು ಲಂಚವಾಗಿ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ಗ್ರಾಮ ಪಂಚಾಯತಿ ಮೇಲೆ ದಾಳಿ ಮಾಡಿ ಪ್ರಕರಣವನ್ನು ಬಯಲಿಗೆಳೆದಿದ್ದಾರೆ ಮತ್ತು ಲೋಕಾಯುಕ್ತ ಅಧಿಕಾರಿಗಳ ಬಲೆಯಲ್ಲಿ ಬಿದ್ದ ಕರಡಿಗುಡ್ಡ ಅವರ ಧಾರವಾಡ ದಲ್ಲಿರುವ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಅದರಗುಂಚಿ ಗ್ರಾಮದ ರೈತ ನಿಂಗಪ್ಪ ಪಾಟೀಲ್ ಇ ಸ್ವತ್ತು ಮಾಡಿಕೊಡಿ ಎಂದು ಗ್ರಾಮ ಪಂಚಾಯತಿಗೆ ಹೋಗಿ ಕೇಳಿಕೊಂಡರೆ ಆಗ ಪಿ ಡಿ ಓ ಕರಡಿಗುಡ್ಡ ಅವರು ಸರೀ ನಾಳೆ ಬೆಳಿಗ್ಗೆ ಎಂಟು ಸಾವಿರ ರೂಪಾಯಿ ತೆಗೆದುಕೊಂಡು ಬಾ ಮಾಡಿಕೊಡುತ್ತೇನೆ ಎಂದು ಹೇಳಿ ಕಳುಹಿಸಿದ್ದರು ರೈತ ನಿಂಗಪ್ಪ ಪಾಟೀಲ್ ಕರಡಿಗುಡ್ಡ ಅವರು ಎಂಟು ಸಾವಿರ ರೂಪಾಯಿ ಲಂಚ ಕೇಳಿದ್ದಕ್ಕೇ ಕಂಗಾಲಾಗಿ ಗ್ರಾಮಸ್ಥರ ಜೊತೆ ಚರ್ಚಿಸಿ ಧಾರವಾಡ ಲೋಕಾಯುಕ್ತ ಅಧಿಕಾರಿಗಳ ಬಳಿ ಹೋಗಿ ವಿಷಯವನ್ನು ತಿಳಿಸಿದ್ದರು ಈ ಮಾಹಿತಿ ಪಡೆದ ಲೋಕಾಯುಕ್ತ ಅಧಿಕಾರಿಗಳು ನಿಂಗಪ್ಪ ಪಾಟೀಲ್ ಅವರನ್ನ ಮುಂದೆ ಕಳುಹಿಸಿ ನಂತರ ಅದರಗುಂಚಿ ಪಂಚಾಯತಿ ಮೇಲೆ ದಾಳಿ ಮಾಡಿದ್ದರು ಇನ್ನೂ ಈ ಕಾರ್ಯಾಚಣೆಯಲ್ಲಿ ಲೋಕಾಯುಕ್ತ ಎಸ್ ಪಿ ಶ್ರೀ ಸತೀಶ್ ಚಿಟಗುಬ್ಬಿ, ಲೋಕಾಯುಕ್ತ ಡಿವೈಎಸ್ ಪಿ ಶ್ರೀ ವಿಜಯ್ ಬಿರಾದಾರ್, ಪೊಲೀಸ್ ಇನ್ಸಪೆಕ್ಟರ್ ರವರ ತಂಡ ದಾಳಿ ಮಾಡಿ ಲಂಚ ಪಡೆಯುತ್ತಿದ್ದ ಅಧಿಕಾರಿಯನ್ನು ವಶಕ್ಕೆ ಪಡೆದು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
ವರದಿ: ಶಿವು ಹುಬ್ಬಳ್ಳಿ .