ಗಂಡನ ಮನೆಯಲ್ಲಿ ಸುಖದಿಂದ ಸಂಸಾರ ಮಾಡಲು ಬಂದಿದ್ದಳು ಆದರೇ ಪ್ರತಿದಿನ ಮನೆಯಲ್ಲಿನ ಕಲಹದಿಂದ ಮನನೊಂದ ಗೃಹಿಣಿ ನಿನ್ನೇ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯ ಪಂಚಾಕ್ಷರಿ ನಗರದಲ್ಲಿ ನಡೆದಿದೆ. ಇನ್ನೂ ಈ ಘಟನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯನ್ನು ಸವಿತಾ ನಾಯ್ಕರ್ ಎಂದು ಹೇಳಲಾಗುತ್ತಿದೆ ಹಾವೇರಿ ಜಿಲ್ಲೆಯ ಶಿಗ್ಗಾವಿ ಕೆ ಎಸ್ ಆರ್ ಪಿ ದಲ್ಲಿ ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಂಗಮೇಶ್ ನಾಯ್ಕರ್ ಅವರ ಮಡದಿಯೇ ಈ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಎಂದು ಗುರುತಿಸಲಾಗುತ್ತಿದೆ. ಮನೆಯ ಸದಸ್ಯೆರು ಸುಮಾರು ಸಲ ಸವಿತಾ ಅವರ ನಂಬರ್ ಕರೆ ಮಾಡದ್ದಾರೆ ನಂತರ ರಾತ್ರಿ ಹೊತ್ತಿಗೆ ಮನೆಯವರೆಲ್ಲರೂ ಪಂಚಾಕ್ಷರಿ ನಗರದ ಮನೆಯ ಬಳಿ ಬಂದು ನೋಡಿದಾಗ ಮನೆಯ ಬಾಗಿಲು ಒಳಗಡೆಯಿಂದ ಲಾಕ್ ಮಾಡಿದ್ದನ್ನು ಗಮನಿಸಿ ಸವಿತಾ ಸವಿತಾ ಎಂದು ಕರೆದಿದ್ದಾರೆ ಬಾಗಿಲು ತೆಗೆಯದಿರುವನ್ನು ಕಂಡು ಇನ್ನೂ
ಬಾಗಿಲನ್ನು ಮುರಿದುಕೊಂಡು ಮನೆಯ ಒಳಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಇನ್ನೂ ಈ ಮಾಹಿತಿ ತಿಳಿಯುತ್ತಿದ್ದಂತೆ ಹುಬ್ಬಳ್ಳಿ ನವನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಹಾಗೂ ಮರಣೋತ್ತರ ಪರೀಕ್ಷೆಗೆ ಸವಿತಾಳ ಮೃತದೇಹವನ್ನು ಹುಬ್ಬಳ್ಳಿಗೆ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿ ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
ವರದಿ: ಶಿವು ಧಾರವಾಡ.