ಕೊಟ್ಟೂರು:- ಪಟ್ಟಣದಲ್ಲಿ ಮರಿ ಕೊಟ್ಟೂರೇಶ್ವರ ದೇವಸ್ಥಾನದಿಂದ ಕೂಡ್ಲಿಗಿ ರಸ್ತೆಯ ಡಾ. ಬಿ.ಆರ್.ಅಂಬೇಡ್ಕರ್ ನಗರದವರೆಗೆ ಸರ್ಕಾರದ ಅನುದಾನದಡಿಯಲ್ಲಿ ನೂತನ ರಸ್ತೆ ಮತ್ತು ವಿದ್ಯುತ್ ದೀಪದ ಕಂಬಗಳನ್ನು ನಿರ್ಮಿಸಿದ್ದು,ಕಂಬಗಳಲ್ಲಿರುವ ವಿದ್ಯುತ್ ತಂತಿಗಳನ್ನು ಕಂಬದ ಒಳಗೆ ಹಾಕಿ ಮುಚ್ಚುವುದು ಬಿಟ್ಟು ಹಾಗೆ ವಿದ್ಯುತ್ ತಂತಿಗಳಿಗೆ ಪ್ಯಾಚ್ ಹಾಕಿ ತಂತಿಗಳನ್ನು ಹಾಗೆ ಹೊರಗೆ ಬಿಟ್ಟಿದ್ದಾರೆ.ರಸ್ತೆಯ ಮಧ್ಯದಲ್ಲಿರುವ ಕಂಬಗಳು ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ ಮತ್ತು ಶಾಲೆಗೆ ಹೋಗುವ ವಿಧ್ಯಾರ್ಥಿಗಳಿಗೆ ಕೈಗೆ ಸಿಗುವ ಹಾಗೆ ಇರುವ ಕಾರಣ ಸಾರ್ವಜನಿಕರಿಗೆ ಈ ವಿದ್ಯುತ್ ತಂತಿಗಳು ತಗುಲಿ ಅನಾಹುತ ಸಂಭವಿಸುವ ಮುನ್ಸೂಚನೆಗಳು ಕಾಣುತ್ತಿದೆ.ಅನಾಹುತ ಸಂಭವಿಸುವ ಮೊದಲು ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ತಂತಿಗಳನ್ನು ವಿದ್ಯುತ್ ಕಂಬದ ಒಳಗಡೆ ಸರಿಪಡಿಸಿ ಅನಾಹುತಗಳನ್ನು ತಡೆಗಟ್ಟಲು ಮುಂದಾಗಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆಗಾಲ ಆರಂಭ ಆಗಿರುವುದರಿಂದ ಹಾಗೂ ತಾಲೂಕಿನಲ್ಲಿ ಒಂದು ವಾರದಿಂದ ಬಿಟ್ಟು ಬಿಡದೆ ಮಳೆ ಬರುತ್ತಿರುವುದರಿಂದ ಮಳೆಗಾಲದಲ್ಲಿ ವಿದ್ಯುತ್ ಸ್ಪರ್ಶಿಸಿ ಸಾವುಗಳು ಆಗಿರುವುದು ನಮ್ ಕಣ್ ಮುಂದೆ ಅನೇಕ ಉದಾಹರಣೆಗಳು ಇವೆ ಹಾಗಾಗಿ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದರೆ ಸಂಬಂಧ ಪಟ್ಟ ಕಚೇರಿಯ ಮುಂದೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕರು ತಿಳಿಸಿ ಭ್ರಷ್ಟರ ಬೇಟೆ ಪತ್ರಿಕೆಯಲ್ಲಿ ಸುದ್ದಿಯನ್ನು ಪ್ರಕಟಿಸಲಾಗಿತ್ತು.ಇದಕ್ಕೆ ಸ್ಪಂದಿಸಿ ಸಂಬಂಧಪಟ್ಟ ಅಧಿಕಾರಿಗಳು ಮರಿ ಕೊಟ್ಟುರೇಶ್ವರ ದೇವಸ್ಥಾನದಿಂದ ಕೂಡ್ಲಿಗಿ ರಸ್ತೆಯ ಡಾ. ಬಿ.ಆರ್.ಅಂಬೇಡ್ಕರ್ ನಗರದವರೆಗೆ ವಿದ್ಯುತ್ ದೀಪದ ಕಂಬಗಳಲ್ಲಿ ಹೊರಗಡೆ ಬಂದಂತಹ ತಂತಿಗಳನ್ನು ಒಳಗಡೆ ಹಾಕಿ ಮುಚ್ಚಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಿದರು.ಅಪಾಯದಲ್ಲಿರುವ ಈ ಕೆಲಸಕ್ಕೆ ಮುಂದೆ ಬಂದು ಸಾರ್ವಜನಿಕರ ರಕ್ಷಣೆ ಕಾಪಾಡಿದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಪಟ್ಟಣದ ಸಾರ್ವಜನಿಕರು ಅಭಿನಂದನೆಗಳನ್ನು ಸಲ್ಲಿಸಿದರು. ವರದಿ: ಮಣಿಕಂಠ