ಅಮೆರಿಕದ ಮ್ಯಾನ್ಹ್ಯಾಟನ್ನಲ್ಲಿ ನಿರ್ಮಾಣ ಮಾಡುತ್ತಿದ್ದ ಕ್ರೇನ್ಗೆ ಬೆಂಕಿ ಹೊತ್ತಿಕೊಂಡಿದ್ದು, ಕೆಳಗಿರುವ ರಸ್ತೆಯಲ್ಲಿರುವ ಕಟ್ಟಡಕ್ಕೆ ಡಿಕ್ಕಿ ಹೊಡೆಯುತ್ತಾ ಕುಸಿದು ಬಿದ್ದಿದೆ. ಈ ಭೀಕರ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಸ್ತೆಗಳಲ್ಲಿ ನಿಂತಿರುವ ಜನರು ಕ್ರೇನ್ ಅಪ್ಪಳಿಸುವುದನ್ನು ನೋಡಿ ಸಾಧ್ಯವಾದಷ್ಟು ದೂರ ಓಡಲು ಪ್ರಯತ್ನಿಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ.
ಗಗನಚುಂಬಿ ಕಟ್ಟಡದ ಮೇಲೆ ಬೆಂಕಿಯ ಜ್ವಾಲೆ ಆವರಿಸಿದ್ದು, ಕ್ರೇನ್ ಕೆಳಗೆ ಬೀಳುತ್ತಿರುವ ಭಯಾನಕ ದೃಶ್ಯದ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Crane has collapsed in Hells Kitchen, New York.pic.twitter.com/OXvMT71Unr
— The Spectator Index (@spectatorindex) July 26, 2023