ಸೆಲೆಬ್ರೆಟಿಗಳ ಹುಟ್ಟುಹಬ್ಬವನ್ನು ಅಭಿಮಾನಿಗಳು ವಿಭಿನ್ನವಾಗಿ ಆಚರಿಸುತ್ತಾರೆ. ಇನ್ನು ಚಿತ್ರರಂಗದ ಸ್ನೇಹಿತರು ವಿಶೇಷವಾಗಿ ಶುಭ ಕೋರುತ್ತಾರೆ. ಸ್ಪೆಷಲ್ ಫೋಟೊ, ವಿಡಿಯೋ ಶೇರ್ ಮಾಡಿ ವಿಶೇಷವಾಗಿ ಕ್ಯಾಪ್ಷನ್ ಕೊಡ್ತಾರೆ. ಹಾಲಿವುಡ್ ನಟಿ ಸಾಂಡ್ರಾ ಬುಲಕ್ ಹುಟ್ಟುಹಬ್ಬಕ್ಕೆ ನಟ ರಯಾನ್ ರೆನಾಲ್ಡ್ಸ್ ಬೆತ್ತಲೆ ವಿಡಿಯೋ ಶೇರ್ ಮಾಡಿ ಶುಭಾಶಯ ಕೋರಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗ್ತಿದೆ.
ಜುಲೈ 26 ರಂದು ಸಾಂಡ್ರಾ ಬುಲಕ್ ತಮ್ಮ 59 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆಕೆಯ 59ನೇ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸಹ ಕಲಾವಿದರು ಮತ್ತು ಸ್ನೇಹಿತರು ಶುಭ ಹಾರೈಸಿದ್ದಾರೆ. ಒಂದ್ಕಾಲದಲ್ಲಿ ಸಾಂಡ್ರಾ ಸಿಕ್ಕಾಪಟ್ಟೆ ಬೋಲ್ಡ್ ಅಭಿನಯದಿಂದ ಮೋಡಿ ಮಾಡಿದ್ದರು. ‘ಸಾಂಡ್ರಾ ಸ್ಪೀಡ್’, ‘ಗ್ರಾವಿಟಿ’, ‘ದಿ ಲಾಸ್ಟ್ ಸಿಟಿ;, ‘ದಿ ಪ್ರಪೋಸಲ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ. ‘ದಿ ಪ್ರಪೋಸಲ್’ ಚಿತ್ರದಲ್ಲಿ ರಯಾನ್ ರೆನಾಲ್ಡ್ಸ್ ಹಾಗೂ ಸಾಂಡ್ರಾ ಬುಲಕ್ ಒಟ್ಟಿಗೆ ನಟಿಸಿದ್ದರು.
ಸದ್ಯ ಸಾಂಡ್ರಾ ಬುಲಕ್ ಹುಟ್ಟುಹಬ್ಬಕ್ಕೆ ‘ದಿ ಪ್ರಪೋಸಲ್’ ಚಿತ್ರದ ಅಸಭ್ಯಕರ ವಿಡಿಯೋ ಶೇರ್ ಮಾಡಿ ರಯಾನ್ ರೆನಾಲ್ಡ್ಸ್ ಶುಭ ಕೋರಿದ್ದಾರೆ. ಅದರಲ್ಲಿ ಇಬ್ಬರು ಬೆತ್ತಲಾಗಿ ಒಬ್ಬರನ್ನೊಬ್ಬರ ತಬ್ಬಿಕೊಳ್ಳುವುದನ್ನು ನೋಡಬಹುದು. ‘ಅಪ್ರತಿಮ ಮತ್ತು ಅದ್ಭುತ ಪ್ರತಿಭೆ ಹೊಂದಿರುವ ಸಾಂಡ್ರಾ ನಿನಗೆ ಹುಟ್ಟುಹಬ್ಬ ಶುಭಾಶಯ” ಎಂದು ಬರೆದುಕೊಂಡಿದ್ದಾರೆ.