ಐದು ಭರವಸೆಗಳನ್ನು ನೀಡಿದ ಕಾಂಗ್ರೆಸ್ ಪಕ್ಷದ ಚುನಾವಣಾ ಕಾರ್ಯಕ್ರಮವು “ಜನ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 123 (2) ರ ಅಡಿಯಲ್ಲಿ ಲಂಚ ಮತ್ತು ಅನಗತ್ಯ ಪ್ರಭಾವಕ್ಕೆ ಸಮನಾದ ಭ್ರಷ್ಟಾಚಾರದ ಅಭ್ಯಾಸಗಳನ್ನು” ಹೊಂದಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಸಿದ್ದರಾಮಯ್ಯ ಅವರು ಸಂವಿಧಾನ ಮತ್ತು ಜನ ಪ್ರಾತಿನಿಧ್ಯ ಕಾಯ್ದೆಯಲ್ಲಿ ವಿವರಿಸಿರುವ ನಿಯಮಗಳು ಮತ್ತು ತತ್ವಗಳನ್ನು ಉಲ್ಲಂಘಿಸಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ಘೋಷಿಸಿದಂತ ಐದು ಗ್ಯಾರಂಟಿ ಯೋಜನೆಗಳು ಅಭ್ಯರ್ಥಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ನೀಡಿದ ಕೊಡುಗೆ ಮತ್ತು ಭರವಸೆಗಳ ಸ್ವರೂಪದಲ್ಲಿವೆ. ಪ್ರತಿವಾದಿಯ (ಸಿದ್ದರಾಮಯ್ಯ) ಒಪ್ಪಿಗೆಯೊಂದಿಗೆ ಇದನ್ನು ಮಾಡಲಾಗಿದೆ. ಅವು ವರುಣಾ ಕ್ಷೇತ್ರದ ಮತದಾರರಿಗೆ ತೃಪ್ತಿಯ ರೂಪದಲ್ಲಿವೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಅಂದರೆ ಪ್ರತಿವಾದಿಗೆ ಮತ ಚಲಾಯಿಸುವಂತೆ ಮತದಾರರನ್ನು ನೇರವಾಗಿ ಪ್ರೇರೇಪಿಸುವ ಉದ್ದೇಶದಂತಿದೆ. ಇದರ ಪರಿಣಾಮವಾಗಿ ಪ್ರತಿವಾದಿಯ ಪರವಾಗಿ ಮತ ಚಲಾಯಿಸಲಾಗಿದೆ. ಹೀಗಾಗಿ ಸಿದ್ಧಾರಮಯ್ಯ ಅವರನ್ನು ಶಾಸಕ ಸ್ಥಾನದಿಂದ ಅನರ್ಹತೆಗೊಳಿಸುವಂತೆ ಅರ್ಜಿಯಲ್ಲಿ ಹೈಕೋರ್ಟ್ ನ್ಯಾಯಪೀಠವನ್ನು ಕೋರಲಾಗಿತ್ತು. ಈ ಸಂಬಂಧ ಕ್ಷೇತ್ರದ ಖಾಸಗಿ ವ್ಯಕ್ತಿ ಕೆ.ಎಂ.ಶಂಕರ ಅವರು ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ಚುನಾವಣಾ ಅರ್ಜಿ ಸಲ್ಲಿಸಿದ್ದರು.
ಇದೇ ವೇಳೇ ಅರ್ಜಿಗೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯರಿಗೆ ಹೈಕೋರ್ಟ್‌ನಿಂದ ನೋಟಿಸ್‌ ಜಾರಿ ಮಾಡಿದೆ.

error: Content is protected !!