ಟಾಲಿವುಡ್​​ ನಟ ಪ್ರಭಾಸ್ ಅವರ ಅಧಿಕೃತ ಫೇಸ್‌ಬುಕ್ ಖಾತೆಯನ್ನು ಕಿಡಿಗೇಡಿಗಳು ಗುರುವಾರ ತಡರಾತ್ರಿ ಹ್ಯಾಕ್ ಮಾಡಿದ್ದಾರೆ. ಈ ಕುರಿತಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಾಕಿಕೊಂಡು ಪ್ರಭಾಸ್ ಅಪ್​ಡೇಟ್ ನೀಡಿದ್ದಾರೆ. ಕಿಡಿಗೇಡಿಗಳು ಪ್ರಭಾಸ್ ಫೇಸ್‌ಬುಕ್ ಅನ್ನು ಹ್ಯಾಕ್ ಮಾಡಿ ಎರಡು ವಿಡಿಯೋಗಳನ್ನು ಶೇರ್ ಮಾಡಿದ್ದಾರೆ.
ಅದರಲ್ಲಿ ಒಂದು ವಿಡಿಯೋಗೆ ‘ ನತದೃಷ್ಟ ಮನುಷ್ಯರು’ ಹಾಗೂ ಇನ್ನೊಂದು ವಿಡಿಯೋಗೆ ‘ವಿಶ್ವದಾದ್ಯಂತ ಚೆಂಡು ವಿಫಲಗೊಳ್ಳುತ್ತೆ’ ಎಂದು ಕ್ಯಾಪ್ಷನ್ ಕೊಡಲಾಗಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಪ್ರಭಾಸ್ ಟ್ವಿಟರ್‌ ಹಾಗೂ ಇನ್‌ಸ್ಟಾಗ್ರಾಂನಲ್ಲಿ ‘ಎಲ್ಲರಿಗೂ ನಮಸ್ಕಾರ, ನನ್ನ ಫೇಸ್‌ಬುಕ್ ಖಾತೆಯನ್ನು ಹ್ಯಾಕ್​​ ಮಾಡಲಾಗಿದೆ. ನಮ್ಮ ತಂಡವು ಇದನ್ನು ಪರಿಹರಿಸುತ್ತಿದೆ’ ಎಂದು ಬರೆದಿದ್ದಾರೆ.


ಕೆಲವು ಇಂಟರ್ನೆಟ್ ಬಳಕೆದಾರರು ಪೋಸ್ಟ್‌ಗಳಿಗೆ ಕಾಮೆಂಟ್ ಮಾಡುವ ಮೂಲಕವಾಗಿ ಆತಂಕ ವ್ಯಕ್ತ ಪಡಿಸಿದ್ದರು. ನಂತರ ತಂಡ ಈ ಖಾತೆಯನ್ನು ಮರುಸ್ಥಾಪಿಸುವುದರ ಜೆತೆಗೆ ಕಾಮೆಂಟ್‌ ಹಾಗೂ ಕಿಡಿಗೇಡಿಗಳು ಹಾಕಿರುವ ಪೋಸ್ಟ್‌ಗಳನ್ನು ತೆಗೆದುಹಾಕಿದ್ದಾರೆ. ಈಗ ಅವರ ಖಾತೆಯನ್ನು ಹ್ಯಾಕರ್ಸ್​​ಗಳ ಕೈನಿಂದ ಮರಳಿ ಪಡೆಯಲಾಗಿದೆ.

error: Content is protected !!