ಶಿವಮೊಗ್ಗದ ವೈಷ್ಣವಿ ಎನ್ನುವ ಮಹಿಳಾ ಅಭಿಮಾನಿಯೊಬ್ಬರು ಇದೀಗ ತಮ್ಮ ರಕ್ತದಲ್ಲಿ ಕಿಚ್ಚನ ಭಾವಚಿತ್ರ ಬಿಡಿಸಿದ್ದಾರೆ. ವೈದ್ಯರ ಸಹಾಯದಿಂದ ತಮ್ಮದ ದೇಹದ ರಕ್ತವನ್ನು ಹೊರ ತೆಗೆದು ಸುದೀಪ್ ಭಾವಚಿತ್ರ ಬರೆದು ಅದಕ್ಕೆ ರಕ್ತವನ್ನು ಬಣ್ಣವಾಗಿ ತುಂಬಿದ್ದಾರೆ. ಈ ವಿಡಿಯೋವನ್ನು ಆಕೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿರುವ ಸುದೀಪ್ ಧನ್ಯವಾದ(ಎಮೋಜಿ) ಎಂದು ಕಾಮೆಂಟ್ ಮಾಡಿದ್ದಾರೆ.
🙏🏼🙏🏼🙏🏼🙏🏼🙏🏼🙏🏼 https://t.co/3My55J93Kg
— Kichcha Sudeepa (@KicchaSudeep) July 27, 2023
ವೈಷ್ಣವಿ ತಮ್ಮ ನೆಚ್ಚಿನ ನಟನ ಮೇಲೆ ಅಭಿಮಾನ ಪ್ರದರ್ಶಸಿರುವ ವಿಡಿಯೋ ಸಖತ್ ಸದ್ದು ಮಾಡ್ತಿದೆ. ಸಾಕಷ್ಟು ಜನ ಅಭಿಮಾನಿಗಳು ಇದಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನು ಸುದೀಪ್ ಧನ್ಯವಾದ ತಿಳಿಸಿರುವ ಪೋಸ್ಟ್ಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಕಿಚ್ಚನಿಗೆ ಇಂಥದ್ದನ್ನು ಪ್ರೇರೇಪಿಸಬೇಡಿ ಎಂದು ಕಿವಿಮಾತು ಹೇಳಿದ್ದಾರೆ.