ಕಳೆದ 3-4 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಶಾಲಾ ಕಟ್ಟಡದ ಮೇಲ್ಛಾವಣಿಯ ಮೇಲ್ಪದರ ಕಳಚಿ ಬಿದ್ದ ಪರಿಣಾಮದಿಂದ ಅದೇ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದ 4 ಜನ ವಿದ್ಯಾರ್ಥಿಗಳು ಗಾಯಗೊಂಡ ದುರ್ಘಟನೆ ಧಾರವಾಡ ತಾಲೂಕಿನ ಬೇಗೂರು ಎಂಬ ಗ್ರಾಮದಲ್ಲಿ ನಡೆದಿದೆ ಬೇಗೂರು ಎಂಬ ಗ್ರಾಮದ ಸರಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು ಅದೇ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಗಳು ಗುರುಗಳು ಪಾಠ ಮಾಡುವುದನ್ನು ಕುಳಿತು ಕೇಳುತ್ತಿರುವಾಗ ಕಟ್ಟಡದ ಮೇಲ್ಪದರ ಕಿತ್ತುಕೊಂಡು ಬಿದ್ದಿದೆ ಇದರಿಂದ ಕೊಠಡಿಯಲ್ಲಿದ್ದ4 ಜನ ವಿದ್ಯಾರ್ಥಿಗಳ ಕೈ ಹಾಗೂ ತಲೆಯ ಭಾಗಕ್ಕೆ ಗಾಯಗಳಾಗಿದ್ದು ಗಾಯಗೊಂಡ ವಿದ್ಯರ್ಥಿಗಳನ್ನು ಗರಗ ಪ್ರಾಥಮಿಕ ಆರೋಗ್ಯ ಸಮುದಾಯ ಕೇಂದ್ರದಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗಿದೆ ಮತ್ತು ಈ ಶಾಲಾ ಕಟ್ಟಡ ತುಂಬಾ ಹಳೆಯದಾಗಿದ್ದು ನಿರಂತರವಾಗಿ ಮಳೆ ಸುರಿದಿದ್ದರಿಂದ ಶಾಲಾ ಕಟ್ಟಡದ ಮೇಲ್ಪದರ ಕಿತ್ತುಕೊಂಡು ಬಿದ್ದಿದೆ ಈ ಸರಕಾರಿ ಶಾಲೆಯಲ್ಲಿ 3 ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು ಯಾವ ಕ್ಷಣದಲ್ಲೂ ಬೇಕಾದರೂ ಅನಾಹುತ ಸಂಭವಿಸಬಹುದು ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ತಕ್ಷಣ ಸಂಭಂದ ಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಗಳು ಹದಗೆಟ್ಟ ಶಾಲಾ ಕಟ್ಟಡವನ್ನು ವಿದ್ಯಾರ್ಥಿಗಳಿಗೋಸ್ಕರ ಸುರಕ್ಷಿತ ಶಾಲಾ ಕಟ್ಟಡವನ್ನಾಗಿ ನಿರ್ಮಿಸಿಕೊಡುತ್ತಾರಾ ಕಾದು ನೋಡಬೇಕಾಗಿದೆ.
ವರದಿ: ಶಿವು ಹುಬ್ಬಳ್ಳಿ .

error: Content is protected !!