ಮಂಡ್ಯ ಜಿಲ್ಲಾ, ಕೃಷ್ಣರಾಜಪೇಟೆ ತಾಲೋಕು, ಬೂಕನಕೆರೆ ಹೋಬಳಿಯ ರಸ್ತೆಗಳ ದುಸ್ಥಿತಿ. ಬೂಕನಕೆರೆ ಗ್ರಾಮವು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನವರ ತವರು ಗ್ರಾಮವಾಗಿದ್ದರು ಸಾಕಷ್ಟು ಮೂಲಭೂತ ಸೌಕರ್ಯ ವಿಲ್ಲದೆ ಸಾಕಷ್ಟು ಸಮಸ್ಯೆಗಳು ತಾಂಡವವಡುತಿದ್ದೆ. ಈ ಗ್ರಾಮವನ್ನು ಅಭಿರುದ್ದಿ ಮಾಡುವೆವೆಂದು ರಾಜಕೀಯ ನಾಯಕರ ಆಶ್ವಾಸನೆಗಳು ಇನ್ನು ಜನರಿಗೆ ಸಿಕ್ಕಿಲ್ಲ!. ಈ ಗ್ರಾಮವು ಹೋಬಳಿಯ ಎಲ್ಲ ರೈತರ, ಕಾರ್ಮಿಕರ ಕೇಂದ್ರವಾಗಿದ್ದರು ಸಹ ಇಲ್ಲಿನ ರಸ್ತೆಗಳು ಹದಗೆಟ್ಟಿದೆ. ಬೂಕನಕೆರೆ ಸರ್ಕಲಿಂದ ಮೈಸೂರಿಗೆ ಹೋಗುವ ರಸ್ತೆಯ ಚಿತ್ರಣಗಳಿವು. ಇದೆ ರಸ್ತೆಯಲ್ಲಿ ಸಾವಿರಾರು ಜನರು, ದೊಡ್ಡ ದೊಡ್ಡ ವಾಹನಗಳು, ಲಾರಿ, ಬಸ್, ಸ್ಕೂಟರ್ ಗಳನ್ನು ದಿನನಿತ್ಯದ ಹೊಡಾಟಕಾಗಿ ಉಪಯೋಗಿಸುತ್ತಾರೆ ಹಾಗು ರೈತರು ದಿನ ನಿತ್ಯ ತಮ್ಮ ಕೆಲಸಕ್ಕಾಗಿ ಎತ್ತಿನ ಬಂಡಿ ಹಸು ಕರುಗಳ ಹೋದಾಟಕ್ಕೆ ಈ ರಸ್ತೆ ಬಳಸುತ್ತಿದಾರೆ. ಈ ರಸ್ತೆಯು ಮೈಸೂರಿಗೆ ಸಂಪರ್ಕ ಕಲ್ಪಿಸಿ ಕೊಡುವ ರಸ್ತೆಯಾಗಿದ್ದರು ಈ ರಸ್ತೆಯ ಅವ್ಯವಸ್ಥೆ ಈ ರೀತಿ ಕಾಣುತಿದೆ. ಈ ರಸ್ತೆಯಲ್ಲಿ ಸಾಕಷ್ಟು ಗುಂಡಿಗಳು ಇದ್ದರು ಅವುಗಳ ಮುಚ್ಚುವ ಹೆಸರಲ್ಲಿ ದುಡ್ಡು ಮಾಡಿದ್ದಾರೆ ವಿನಹ ಅವುಗಳನ್ನು ಸರಿ ಪಡಿಸಿಲ್ಲ ಮಳೆಯಾದರೆ ರಸ್ತೆಗಳು ಕೆರೆಯಂತೆ ಕಾಣುತ್ತವೆ ಮಳೆಗಾಲದಲ್ಲಿ ರಸ್ತೆ ಸರಿಯಾಗಿ ಕಾಣದೆ ಜನರು ಬಿದ್ದು ಕೈ ಕಾಲು ಮುರುದುಕೊಂಡಿರುತ್ತಾರೆ ಹಾಗು ಸಾಕಷ್ಟು ವಾಹನಗಳು ಕೆಟ್ಟಿದ್ದು ಉಂಟು. ಇನ್ನಾದರೂ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕೆಂದು ಸಾಕಷ್ಟು ಸಾರ್ವಜನಿಕರು ಕೇಳುತಿದ್ದಾರೆ.
ವರದಿ: ಎಲ್.ಎನ್ ಮೂರ್ತಿ