ಅಕ್ಷರ ದಾಸೋಹದ ಅಕ್ಕಿ ಕದ್ದು, ಸಿಬ್ಬಂದಿ ನೇರವಾಗಿ ಸಿಕ್ಕಿಬಿದ್ದಿರು ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದಲ್ಲಿ ನಡೆದಿದೆ.
ವಡ್ಡಗೆರೆ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುವ ಅಡುಗೆ ಸಿಬ್ಬಂದಿ ದಿನಾಂಕ 22-9-2023 ರಂದು ಶಾಲೆಯ ಮಕ್ಕಳಿಗೆ ಬಂದಿರುವಂತಹ ಅಕ್ಕಿಯನ್ನು ತನ್ನ ಮಗನ ಸಹಾಯದೊಂದಿಗೆ ಕದ್ದು ಮನೆಗೆ ಸಾಗಿಸುವಂತಹ ಸಂದರ್ಭದಲ್ಲಿ ಗ್ರಾಮಸ್ಥರ ಕೈಗೆ ನೇರವಾಗಿ ಸಿಕ್ಕಿಬಿದ್ದಿದ್ದಾರೆ.
ಸಿಕ್ಕಿಬಿದ್ದ ಬಳಿಕ ಅಡುಗೆ ಸಿಬ್ಬಂದಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು ಮನೆಯಲ್ಲಿ ಅಕ್ಕಿ ಇಲ್ಲದ ಕಾರಣ ಇಂತ ಕೆಲಸಕ್ಕೆ ಮುಂದಾಗಿದ್ದೇನೆ ಎಂದು ಹೇಳಿಕೊಂಡಿರುತ್ತಾರೆ.
ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ನಂತರ ಗ್ರಾಮಸ್ಥರು ಪಟ್ಟು ಹಿಡಿದು ಇವರುಗಳನ್ನು ಕೆಲಸದಿಂದ ವಜಾ ಮಾಡಬೇಕೆಂದು ಒತ್ತಾಯಿಸಿರುತ್ತಾರೆ. ಆತಂಕಕೀಡಾದ ಅಡುಗೆ ಸಿಬ್ಬಂದಿ ಸ್ಥಳದಲ್ಲೇ ಮೂರ್ಛೆ ಹೋಗಿದ್ದು ಗ್ರಾಮಸ್ಥರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಬಿಪಿ ವ್ಯತ್ಯಾಸ ಆಗಿರುವ ಕಾರಣ ಮೂರ್ಚೆ ಹೋಗಿದ್ದಾರೆ ಯಾವುದೇ ರೀತಿಯ ಅಪಾಯವಿಲ್ಲ ಎಂದು ವೈದ್ಯರು ಸ್ಪಷ್ಟಣೆ ನೀಡಿರುತ್ತಾರೆ.
ಶಾಲೆಯಲ್ಲಿ ಅಡುಗೆ ಕೆಲಸ ಮಾಡಲು ಇಬ್ಬರು ಸಿಬ್ಬಂದಿಗಳಿದ್ದು ಇಬ್ಬರು ಸೇರಿಕೊಂಡೆ ಇಂತಹ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಘಟನೆ ನಡೆದ ಬಳಿಕ ಗ್ರಾಮಸ್ಥರು ಇಬ್ಬರನ್ನು ಕೆಲಸದಿಂದ ವಜಾ ಮಾಡಬೇಕೆಂದು ಒತಾಯಿಸಿರುತ್ತಾರೆ. ಈ ವಿಚಾರದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಯಾವ ರೀತಿಯ ಕ್ರಮಕ್ಕೆ ಮುಂದಾಗುತ್ತಾರೆ ಕಾದುನೋಡಬೇಕಿದೆ.